ADVERTISEMENT

IPL 2025: ಆರ್‌ಸಿಬಿಯ ಮಾಜಿ ನಾಯಕ ಡುಪ್ಲೆಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಉಪನಾಯಕ

ಪಿಟಿಐ
Published 17 ಮಾರ್ಚ್ 2025, 11:51 IST
Last Updated 17 ಮಾರ್ಚ್ 2025, 11:51 IST
<div class="paragraphs"><p>ಫಾಫ್ ಡುಪ್ಲೆಸಿ</p></div>

ಫಾಫ್ ಡುಪ್ಲೆಸಿ

   

ಪಿಟಿಐ ಚಿತ್ರ

ನವದೆಹಲಿ: ದಕ್ಷಿಣ ಆಫ್ರಿಕಾ ಕ್ರಿಕೆಟಿಗ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಉಪನಾಯಕನ್ನಾಗಿ ನೇಮಿಸಿದೆ.

ADVERTISEMENT

ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯು ಇದೇ ತಿಂಗಳ 22ರಂದು ಆರಂಭವಾಗಲಿದೆ.

ಹೊಸ ತಂಡದ ಕುರಿತು ಮಾತನಾಡಿರುವ ಪ್ಲೆಸಿ, 'ಕಾತರದಿಂದ ಕಾಯುತ್ತಿದ್ದೇನೆ. ಡೆಲ್ಲಿ ತಂಡದಲ್ಲಿ ಶ್ರೇಷ್ಠ ಮತ್ತು ಅದ್ಭುತ ಆಟಗಾರರಿದ್ದಾರೆ. ಖಂಡಿತವಾಗಿಯೂ ನನಗೆ ಖುಷಿಯಾಗಿದೆ' ಎಂದು ಹೇಳಿಕೊಂಡಿದ್ದಾರೆ.

40 ವರ್ಷದ ಪ್ಲೆಸಿ ಕಳೆದ ಮೂರು ಆವೃತ್ತಿಗಳಲ್ಲಿ ಆರ್‌ಸಿಬಿಯನ್ನು ಮುನ್ನಡೆಸಿದ್ದರು. ಆದಾಗ್ಯೂ, ಕಳೆದ ವರ್ಷ ನಡೆದ ಮೆಗಾ ಹರಾಜಿಗೂ ಮುನ್ನ ಅವರನ್ನು ಕೈಬಿಡಲಾಗಿತ್ತು. ಅವರನ್ನು ಡೆಲ್ಲಿ ಪಡೆ ₹ 2 ಕೋಟಿ ನೀಡಿ ಖರೀದಿಸಿತ್ತು.

ಐಪಿಎಲ್‌ನಲ್ಲಿ 145 ಪಂದ್ಯ ಆಡಿರುವ ಪ್ಲೆಸಿ, 37 ಅರ್ಧಶತಕ ಸಹಿತ 4,571 ರನ್‌ ಗಳಿಸಿದ್ದಾರೆ.

ಟೀಂ ಇಂಡಿಯಾದ ಆಲ್‌ರೌಂಡರ್‌ ಅಕ್ಷರ್‌ ಪಟೇಲ್ ಅವರನ್ನು ಡೆಲ್ಲಿ ಪಡೆ ನಾಯಕನನ್ನಾಗಿ ಶುಕ್ರವಾರ ಘೋಷಿಸಿತ್ತು.

ಡೆಲ್ಲಿ ತಂಡವು ತನ್ನ ಮೊದಲ ಪಂದ್ಯವನ್ನು ವಿಶಾಖಪಟ್ಟಣದಲ್ಲಿ ಮಾರ್ಚ್‌ 24ರಂದು ಆಡಲಿದ್ದು, ಲಖನೌ ಸೂಪರ್‌ ಜೈಂಟ್ಸ್ ಸವಾಲನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.