
ಐಪಿಎಲ್ ಹರಾಜು
(ಪಿಟಿಐ ಚಿತ್ರ)
ಇಂಡಿಯನ್ ಪ್ರೀಮಿಯರ್ ಲೀಗ್ 2026ನೇ ಸಾಲಿನ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಇಂದು (ಡಿಸೆಂಬರ್ 16) ಅಬುಧಾಬಿಯಲ್ಲಿ ನಡೆಯಲಿರುವ ಮಿನಿ ಆಕ್ಷನ್‌ನಲ್ಲಿ 369 ಆಟಗಾರರು ಭಾಗವಹಿಸಿದ್ದಾರೆ. ಎಲ್ಲಾ 10 ಫ್ರಾಂಚೈಸಿಗಳು ಖಾಲಿ ಇರುವ ಒಟ್ಟು 77 ಆಟಗಾರರಿಗಾಗಿ ಬಿಡ್ಡಿಂಗ್ ನಡೆಸಲಿದ್ದಾರೆ.
ಈ ಬಾರಿ ಐಪಿಎಲ್ ಆಕ್ಷನ್‌ನಲ್ಲಿರುವ ಪ್ರಮುಖ ಆಟಗಾರರು ಯಾರು? ಯಾರಾಗಬಹುದು ಫ್ರಾಂಚೈಸಿಗಳ ನೆಚ್ಚಿನ ಆಟಗಾರರು ಎಂಬುದನ್ನು ನೋಡೋಣ.
ವಿಶೇಷವಾಗಿ ಆಲ್‌ರೌಂಡರ್‌ಗಳ ಮೇಲೆ ಫ್ರಾಂಚೈಸಿಗಳ ಕಣ್ಣು ನೆಟ್ಟಿದೆ. ಅದರಲ್ಲೂ ಕ್ಯಾಮರೋನ್ ಗ್ರೀನ್, ವೆಂಕಟೇಶ್ ಅಯ್ಯರ್, ಲಿಯಾಮ್ ಲಿವಿಂಗ್‌ಸ್ಟೋನ್, ಗಸ್ ಆಟ್ಕಿನ್‌ಸನ್, ವನಿಂದು ಹಸರಂಗ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿದ್ದಾರೆ.
ಬ್ಯಾಟರ್‌ಗಳಾದ ಡೇವಿಡ್ ಮಿಲ್ಲರ್, ಪೃಥ್ವಿ ಶಾ, ಡೆವೊನ್ ಕಾನ್ವೆ, ಜೇಕ್ ಫ್ರೆಸರ್ ಮೆಕ್‌ಗುರ್ಕ್, ಸರ್ಫರಾಜ್ ಖಾನ್, ಸ್ಟೀವ್ ಸ್ಮಿತ್ ಹಾಗೂ ರಚಿನ್ ರವೀಂದ್ರ, ಕೂಡ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.
ವಿಕೆಟ್ ಕೀಪರ್‌ಗಳಾದ. ಕ್ವಿಂಡನ್ ಡಿ ಕಾಕ್, ಫಿನ್ ಅಲೆನ್, ಜಾನಿ ಬೆಸ್ಟೊ, ಬೆನ್ ಡಕೆಟ್, ರೆಹಮಾನುಲ್ಲಾ ಗುರ್ಬಾಜ್, ಜೇಮಿ ಸ್ಮಿತ್ ಅವರನ್ನು ಖರೀದಿಸಲು ಫ್ರಾಂಚೈಸಿಗಳು ಮುಗಿಬೀಳುವ ಸಾಧ್ಯತೆ ಇದೆ.
ಬೌಲರ್‌ಗಳಾದ, ಜೆರಾಲ್ಡ್ ಕೋಟ್ಜೆ, ರವಿ ಬಿಷ್ಣೋಯ್ ಆಕಾಶ್ ದೀಪ್, ಜೇಕಬ್ ಡಫಿ, ಮ್ಯಾಟ್ ಹೆನ್ರಿ, ಶಿವಂ ಮಾವಿ, ಅನ್ರಿಚ್ ನೋಕಿಯಾ, ಮಥೀಶ ಪತಿರಾಣ, ರಾಹುಲ್ ಚಹರ್, ಮುಜೀಬ್ ಉರ್ ರೆಹಮಾನ್ ಹಾಗೂ ಮಹೀಶ್ ತೀಕ್ಷಣ ಮೇಲೆ ಫ್ರಾಂಚೈಸಿಗಳು ಕಣ್ಣು ನೆಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.