ADVERTISEMENT

ರೋಹಿತ್, ಯುವಿ, ಚಾಹಲ್; ಐಪಿಎಲ್‌ನ ಹ್ಯಾಟ್ರಿಕ್ ವಿಕೆಟ್ ಸಾಧಕರ ಪಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮೇ 2025, 2:54 IST
Last Updated 1 ಮೇ 2025, 2:54 IST
<div class="paragraphs"><p>ಯಜುವೇಂದ್ರ ಚಾಹಲ್</p></div>

ಯಜುವೇಂದ್ರ ಚಾಹಲ್

   

(ಪಿಟಿಐ ಚಿತ್ರ)

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಯಜುವೇಂದ್ರ ಚಾಹಲ್, ಎರಡನೇ ಸಲ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.

ADVERTISEMENT

ಚೆಪಾಕ್‌ನಲ್ಲಿ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚಾಹಲ್, ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್‌ಗಳ ಸಾಧನೆ ಮಾಡಿದರು.

ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ಒಂದಕ್ಕಿಂತ ಹೆಚ್ಚು ಸಲ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿದ್ದಾರೆ.

ಈ ಹಿಂದೆ 2022ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಚಾಹಲ್ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದರು.

ಐಪಿಎಲ್‌ನಲ್ಲಿ ಅತಿ ಹೆಚ್ಚು ಹ್ಯಾಟ್ರಿಕ್ ವಿಕೆಟ್ ಗಳಿಸಿದ ಗೌರವ ಅಮಿತ್ ಮಿಶ್ರಾ ಅವರಿಗೆ ಸಲ್ಲುತ್ತದೆ. ಅಮಿತ್ ಒಟ್ಟು ಮೂರು ಸಲ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ಇನ್ನು ಯುವರಾಜ್ ಸಿಂಗ್ ಎರಡು ಸಲ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.

ಅಮಿತ್ ಮಿಶ್ರಾ 2008, 2011 ಹಾಗೂ 2013ರಲ್ಲಿ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದರು. ಯುವಿ 2009ರ ಆವೃತ್ತಿಯೊಂದರಲ್ಲೇ ಎರಡು ಸಲ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು.

ನಿಮಗಿದು ಗೊತ್ತೇ?

ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಬೌಲಿಂಗ್‌ನಲ್ಲೂ ತಮ್ಮ ಕೈಚಳಕ ತೋರಿದ್ದರು. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ರೋಹಿತ್ ಶರ್ಮಾ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದರು.

ಒಟ್ಟಾರೆಯಾಗಿ ಐಪಿಎಲ್‌ನಲ್ಲಿ 18 ಬೌಲರ್‌ಗಳು ಈವರೆಗೆ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧಕರ ಸಂಪೂರ್ಣ ಪಟ್ಟಿ ಇಲ್ಲಿದೆ:

  • ಅಮಿತ್ ಮಿಶ್ರಾ: 3 (2008, 2011, 2013)

  • ಯುವರಾಜ್ ಸಿಂಗ್: 2 (2009)

  • ಯಜುವೇಂದ್ರ ಚಾಹಲ್: 2 (2022, 2025)

  • ಲಕ್ಷ್ಮೀಪತಿ ಬಾಲಾಜಿ: 1 (2008)

  • ಮಖಾಯ ಎನ್‌ಟಿನಿ: 1 (2008)

  • ರೋಹಿತ್ ಶರ್ಮಾ: 1 (2009)

  • ಅಜಿತ್ ಚಾಂದಿಲ: 1 (2012)

  • ಸುನಿಲ್ ನಾರಾಯಣ್: 1 (2013)

  • ಪ್ರವೀಣ್ ತಾಂಬೆ: 1 (2014)

  • ಶೇನ್ ವಾಟ್ಸನ್: 1 (2014)

  • ಅಕ್ಷರ್ ಪಟೇಲ್: 1 (2016)

  • ಆ್ಯಂಡ್ರೆ ಟೈ: 1 (2017)

  • ಸ್ಯಾಮುವೆಲ್ ಬದ್ರೀ: 1 (2017)

  • ಜೈದೇವ್ ಉನಾದ್ಕಟ್: 1 (2017)

  • ಸ್ಯಾಮ್ ಕರನ್: 1 (2019)

  • ಶ್ರೇಯಸ್ ಗೋಪಾಲ್: 1 (2019)

  • ಹರ್ಷಲ್ ಪಟೇಲ್: 1 (2021)

  • ರಶೀದ್ ಖಾನ್: 1 (2023)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.