ADVERTISEMENT

ಪಂಜಾಬ್ ಬೌಲಿಂಗ್ ಕೋಚ್ ಹುದ್ದೆಗೆ ಕನ್ನಡಿಗ ಜೋಶಿ ದಿಢೀರ್ ರಾಜೀನಾಮೆ: ಕಾರಣವೇನು?

ಪಿಟಿಐ
Published 7 ಅಕ್ಟೋಬರ್ 2025, 5:48 IST
Last Updated 7 ಅಕ್ಟೋಬರ್ 2025, 5:48 IST
<div class="paragraphs"><p>ಸುನಿಲ್ ಜೋಶಿ</p></div>

ಸುನಿಲ್ ಜೋಶಿ

   

ಚಿತ್ರ ಕೃಪೆ: @PunjabKingsIPL

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್‌ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕನ್ನಡಿಗ ಸುನಿಲ್ ಜೋಶಿ ಸೋಮವಾರದಂದು ದಿಢೀರ್ ರಾಜೀನಾಮೆ ನೀಡಿದ್ದಾರೆ. ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ತಿಳಿದು ಬಂದಿದೆ.

ADVERTISEMENT

55 ವರ್ಷದ ಮಾಜಿ ಎಡಗೈ ಸ್ಪಿನ್ನರ್, ಐಪಿಎಲ್ 2023ಕ್ಕೂ ಮೊದಲು ಪಂಜಾಬ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು. 2025ನೇ ಸಾಲಿನಲ್ಲಿ ಪಂಜಾಬ್ ಕಿಂಗ್ಸ್ ಫೈನಲ್ ಪ್ರವೇಶಿಸಿದ ತಂಡದ ಭಾಗವಾಗಿದ್ದರು.

ಅವರು ‘ಬೆಂಗಳೂರಿನಲ್ಲಿರುವ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದಾಗಿ ಪಂಜಾಬ್ ತಂಡವನ್ನು ತೊರೆಯುತ್ತಿದ್ದಾರೆ‘ ಎಂದು ಐಪಿಎಲ್ ಮೂಲವೊಂದು ಪಿಟಿಐಗೆ ತಿಳಿಸಿದೆ.

ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿದ್ದಾಗ ಜೋಶಿ ಪಂಜಾಬ್ ಕಿಂಗ್ ಕೋಚಿಂಗ್ ಸಿಬ್ಬಂದಿಯ ಭಾಗವಾಗಿ ನೇಮಕಗೊಂಡಿದ್ದರು. ಜೋಶಿ 1996 ರಿಂದ 2001 ರವರೆಗೆ ಭಾರತ ಪರ 15 ಟೆಸ್ಟ್ ಮತ್ತು 69 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.