ರಿಯಾನ್ ಪರಾಗ್
(ಪಿಟಿಐ ಚಿತ್ರ)
ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, 'ಹ್ಯಾಟ್ರಿಕ್' ಸೇರಿದಂತೆ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳ ಸಾಧನೆ ಮಾಡಿದ್ದಾರೆ.
ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪರಾಗ್ ಪರಾಕ್ರಮ ಮೆರೆದಿದ್ದಾರೆ.
207 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ ಒಂದು ಹಂತದಲ್ಲಿ 7.5 ಓವರ್‌ಗಳಲ್ಲಿ 71 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಪರಾಗ್, ಕೇವಲ 27 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು.
ಅಷ್ಟೇ ಅಲ್ಲದೆ ಮೊಯಿನ್ ಅಲಿ ಎಸೆದ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸೇರಿದಂತೆ ಸತತ ಐದು ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ.
ಆ ಮೂಲಕ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಅವರೊಂದಿಗೆ ಎಲೈಟ್ ಪಟ್ಟಿಗೆ ಸೇರಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಈವರೆಗೆ ಐದು ಮಂದಿ ಬ್ಯಾಟರ್‌ಗಳು ಮಾತ್ರ ಓವರ್‌ವೊಂದರಲ್ಲಿ ಐದು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ವಿವರ ಇಲ್ಲಿದೆ...
ಕ್ರಿಸ್ ಗೇಲ್: 2012 (ರಾಹುಲ್ ಶರ್ಮಾ ವಿರುದ್ಧ)
ರಾಹುಲ್ ತೆವಾಟಿಯಾ: 2020 (ಕಾಟ್ರೆಲ್ ವಿರುದ್ಧ)
ರವೀಂದ್ರ ಜಡೇಜ: 2021 (ಹರ್ಷಲ್ ಪಟೇಲ್ ವಿರುದ್ಧ)
ರಿಂಕು ಸಿಂಗ್: 2023 (ಯಶ್ ದಯಾಳ್ ವಿರುದ್ಧ)
ರಿಯಾನ್ ಪರಾಗ್: 2025 (ಮೊಯಿನ್ ಅಲಿ ವಿರುದ್ಧ)
ಸತತ ಆರು ಸಿಕ್ಸರ್ ದಾಖಲೆ...
ಅಷ್ಟೇ ಅಲ್ಲದೆ ರಿಯಾನ್ ಪರಾಗ್, ಸತತ ಆರು ಸಿಕ್ಸರ್ ಬಾರಿಸಿದ ದಾಖಲೆ ಬರೆದಿದ್ದಾರೆ. ಮೊಯಿನ್ ಅಲಿ ಎಸೆದ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿದ ರಿಯಾನ್, ಬಳಿಕ ವರುಣ್ ವರುಣ್ ಅವರ ಓವರ್‌ನಲ್ಲಿ ತಾವು ಎದುರಿಸಿದ ಮೊದಲನೇ ಚೆಂಡನ್ನು ರಿವರ್ಸ್ ಸ್ವೀಪ್ ಮೂಲಕ ಸಿಕ್ಸರ್‌ಗಟ್ಟಿದರು. ಆ ಮೂಲಕ ಸತತ ಆರು ಎಸೆತಗಳಲ್ಲಿ ಸಿಕ್ಸರ್‌ಗಳ ಸಾಧನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.