ADVERTISEMENT

IPL: ಸ್ಯಾಮ್ಸನ್‌ಗಾಗಿ ಆರ್‌ಆರ್‌ಗೆ ಜಡೇಜ, ಕರನ್ ಬಿಟ್ಟುಕೊಡಲು ಮುಂದಾದ ಸಿಎಸ್‌ಕೆ!

ಪಿಟಿಐ
Published 11 ನವೆಂಬರ್ 2025, 12:36 IST
Last Updated 11 ನವೆಂಬರ್ 2025, 12:36 IST
<div class="paragraphs"><p>ರವೀಂದ್ರ ಜಡೇಜಾ ಹಾಗೂ ಸಂಜು ಸ್ಯಾಮ್ಸನ್</p></div>

ರವೀಂದ್ರ ಜಡೇಜಾ ಹಾಗೂ ಸಂಜು ಸ್ಯಾಮ್ಸನ್

   

ಚಿತ್ರ ಕೃಪೆ: @cricbuzz

ನವದೆಹಲಿ: ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತಮ್ಮ ನಾಯಕ ಸಂಜು ಸ್ಯಾಮ್ಸನ್‌ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ನ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ ಮತ್ತು ಸ್ಯಾಮ್ ಕರನ್ ಅವರ ಜೊತೆ ವಿನಿಮಯ (Trade) ಮಾಡಿಕೊಳ್ಳುವ ಸಾಧ್ಯತೆ ಇದೆ.

ADVERTISEMENT

ಸ್ಯಾಮ್ಸನ್ ತಮ್ಮ ಐಪಿಎಲ್ ವೃತ್ತಿಜೀವನದ ಬಹುಪಾಲು ಕ್ರಿಕೆಟ್ ಅನ್ನು ರಾಜಸ್ಥಾನ ರಾಯಲ್ಸ್ ಜೊತೆಗೆ ಕಳೆದಿದ್ದಾರೆ. ಮಾತ್ರವಲ್ಲ, ಅವರು 2021ರಿಂದ ರಾಜಸ್ಥಾನ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ. ಒಮ್ಮೆ ತಂಡವನ್ನು ಫೈನಲ್‌ಗೂ ತೆಗೆದುಕೊಂಡು ಹೋಗಿದ್ದರು.

ಭಾರತ ಟಿ20 ತಂಡದ ವಿಕೆಟ್ ಕೀಪರ್, ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿರುವುದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಅಧಿಕಾರಿಯೊಬ್ಬರು, ಪಿಟಿಐಗೆ ತಿಳಿಸಿದ್ದಾರೆ.

‘ನಾವು ಸಂಜು ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದ್ದೇವೆ ಎಂಬುದು ಎಲ್ಲರಿಗೂ ತಿಳಿದಿದೆ. ವಿನಿಮಯದ (ಟ್ರೇಡ್) ಮೂಲಕವೇ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದ್ದೇವೆ. ಆದರೆ, ಆರ್‌ಆರ್ ಫ್ರಾಂಚೈಸಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಸಂಜು ಸಿಎಸ್‌ಕೆ ಪರ ಆಡುತ್ತಾರೆ ಎಂದು ಹೆಸರು ಹೇಳಲು ಇಚ್ಚಿಸದ ಹಿರಿಯ ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದರು.

2008 ರ ಐಪಿಎಲ್ ಉದ್ಘಾಟನಾ ವರ್ಷದ‌ಲ್ಲಿ ಚಾಂಪಿಯನ್ ಆಗಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಸಂಜು ಸ್ಯಾಮ್ಸನ್ 11 ವರ್ಷಗಳ ಕಾಲ ಪ್ರತಿನಿಧಿಸಿದ್ದಾರೆ. ಆದರೆ, 2025ರ ಐಪಿಎಲ್ ಬಳಿಕ ತಾವು ಹೊಸ ಫ್ರಾಂಚೈಸಿ ಜೊತೆ ಆಡಲು ಉತ್ಸುಕರಾಗಿರುವುದಾಗಿಯೂ ಹಾಗೂ ಆರ್‌ಆರ್ ಫ್ರಾಂಚೈಸಿಯನ್ನು ತೊರೆಯಲು ನಿರ್ಧರಿಸಿರುವುದಾಗಿಯೂ ಸಂಜು ಹೇಳಿದ್ದರು.

ಮೊದಲ ಎರಡು ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ರವೀಂದ್ರ ಜಡೇಜ ಬಳಿಕ ಬಹುಪಾಲು ಐಪಿಎಎಲ್‌ ಅನ್ನು ಸಿಎಸ್‌ಕೆ ಪರ ಆಡಿದ್ದಾರೆ. ಮಾತ್ರವಲ್ಲ, 2022ರಲ್ಲಿ ಎಂ.ಎಸ್. ಧೋನಿ ನಾಯಕತ್ವದಿಂದ ಕೆಳಗಿಳಿದಾಗ ನಾಯಕತ್ವದ ಜವಾಬ್ದಾರಿ ಕೂಡ ನಿಭಾಯಿಸಿದ್ದರು. ಸ್ಯಾಮ್ ಕರನ್ ಸಿಎಸ್‌ಕೆ ಹಾಗೂ ಪಂಜಾಬ್ ಪರ ಆಡಿದ್ದಾರೆ. ಸದ್ಯ, ಆಟಗಾರರ ವಿನಿಮಿಯ ಮಾತುಕತೆಯಲ್ಲಿದ್ದು, ಉಭಯ ಫ್ರಾಂಚೈಸಿಗಳು ಲಿಖಿತ ಒಪ್ಪಿಗೆ ನೀಡಿದ ಬಳಿಕ ಒಪ್ಪಂದ ರೂಪುಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.