ADVERTISEMENT

ರೂಪದರ್ಶಿ ಅದಿತಿ ಹುಂಡಿಯಾ ಮದುವೆಯಾಗಲಿರುವ ಇಶಾನ್?: ತಾಯಿ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2026, 6:29 IST
Last Updated 18 ಫೆಬ್ರುವರಿ 2026, 6:29 IST
<div class="paragraphs"><p>ಇಶಾನ್ ಕಿಶನ್</p></div>

ಇಶಾನ್ ಕಿಶನ್

   

(ಪಿಟಿಐ ಚಿತ್ರ)

ನವದಹೆಲಿ: ಪ್ರಸಕ್ತ ಸಾಗುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಬ್ಯಾಟ್ ಮೂಲಕವೇ ಅಬ್ಬರಿಸುತ್ತಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಎಡಗೈ ಬ್ಯಾಟರ್ ಇಶಾನ್ ಕಿಶನ್, ಮತ್ತೆ ಸುದ್ದಿಯಲ್ಲಿದ್ದಾರೆ.

ADVERTISEMENT

ಇಶಾನ್ ಕಿಶನ್ ಅವರು ರೂಪದರ್ಶಿ ಅದಿತಿ ಹುಂಡಿಯಾ ಅವರನ್ನು ಮದುವೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ಕುರಿತು ಇಶಾನ್ ಅವರ ತಾತ ನೀಡಿರುವ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಚರ್ಚೆಗೆ ಈಡಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಇಶಾನ್ ಅವರ ತಾಯಿ ಸುಚಿತ್ರಾ ದೇವಿ, 'ಮಗನಿಗೆ ಈಗ ಮದುವೆಯ ಸಮಯ ಅಲ್ಲ. ಅವನಿಗೆ ಕ್ರಿಕೆಟ್ ಆಡುವ ಸಮಯ. ಮದುವೆ ಬಗ್ಗೆ ಮಾತನಾಡುವ ವಯಸ್ಸಾಗಿಲ್ಲ' ಎಂದು ಹೇಳಿದ್ದಾರೆ.

'ತಾತ ವಯಸ್ಸಾಗಿದ್ದರಿಂದ ಸ್ವಲ್ಪ ಉತ್ಸಾಹದಿಂದ ಮಾತನಾಡಿದ್ದಾರೆ. ಸಾಮಾಜಿಕ ಮಾಧ್ಯಗಳಲ್ಲಿ ಏನಾದರೂ ವಿಷಯ ಬರುತ್ತಲೇ ಇರುತ್ತದೆ. ಅದನ್ನು ನೋಡಿಕೊಂಡು ಮಾತನಾಡಿರಬಹುದು. ಸದ್ಯ ಇಶಾನ್ ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ' ಎಂದಿದ್ದಾರೆ.

ಈ ಮೊದಲು ಅದಿತಿ ಹುಂಡಿಯಾ ಇಶಾನ್ ಅವರ ಗರ್ಲ್ ಫ್ರೆಂಡ್ ಎಂದು ತಾತ ಅನುರಾಗ್ ಪಾಂಡೆ ಹೇಳಿಕೆ ನೀಡಿದ್ದರು. 'ಇಶಾನ್ ಜೀವನ ಸಂಗಾತಿಯಾಗಿ ಯಾರನ್ನಾದರೂ ಆಯ್ಕೆ ಮಾಡಿದರೂ ಒಪ್ಪಿಕೊಳ್ಳುತ್ತೇವೆ. ಮಕ್ಕಳ ಸಂತೋಷವೇ ನಮಗೆ ಮುಖ್ಯ' ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.