ADVERTISEMENT

ಗಾಯಗೊಂಡಿದ್ದ ಜೇಕಬ್ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 20:15 IST
Last Updated 30 ಜನವರಿ 2019, 20:15 IST
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೇಕಬ್ ಮಾರ್ಟಿನ್ –ಟ್ವಿಟರ್ ಚಿತ್ರ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೇಕಬ್ ಮಾರ್ಟಿನ್ –ಟ್ವಿಟರ್ ಚಿತ್ರ   

ಬರೋಡಾ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಸುಮಾರು ಒಂದು ತಿಂಗಳಿನಿಂದ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇದೀಗ ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಇನ್ನೂ ಎರಡರಿಂದ ಮೂರು ತಿಂಗಳು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಬರೋಡಾದ ಅವರು ಭಾರತ ತಂಡದಲ್ಲಿ ಹತ್ತು ಏಕದಿನ ಪಂದ್ಯಗಳನ್ನು ಆಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದರು.

ಅಪಘಾತದ ನಂತರ ಚಿಕಿತ್ಸೆಗಾಗಿ ಅವರು ಆರ್ಥಿಕ ಮುಗ್ಗಟ್ಟು ಎದುರಿಸಿದ್ದರು. ಆ ಸಂದರ್ಭದಲ್ಲಿ ಬಿಸಿಸಿಐ ಐದು ಲಕ್ಷ ರೂಪಾಯಿ, ಬರೋಡಾ ಕ್ರಿಕೆಟ್‌ ಸಂಸ್ಥೆ ಮೂರು ಲಕ್ಷ ರೂಪಾಯಿಯ ನೆರವು ನೀಡಿತ್ತು. ಕ್ರಿಕೆಟಿಗ ಕೃಣಾಲ್ ಪಾಂಡ್ಯ ಮತ್ತು ಸೌರವ್ ಗಂಗೂಲಿ ಅವರು ಸಹಾಯಹಸ್ತ ಚಾಚಿದ್ದರು.

ADVERTISEMENT

‘ಸಮಯಕ್ಕೆ ಸರಿಯಾಗಿ ಹಣದ ನೆರವು ನೀಡಿರುವ ಎಲ್ಲರಿಗೂ ಧನ್ಯವಾದಗಳು. ಈ ಸಹಾಯವಿಲ್ಲದಿದ್ದರೆ ಅವರು ಬದುಕಿ ಉಳಿಯುತ್ತಿರಲಿಲ್ಲ. ಇನ್ನೂ ಮೂರು ತಿಂಗಳಿಗೂ ಹೆಚ್ಚು ಕಾಲದ ಚಿಕಿತ್ಸೆ, ಆರೈಕೆಯ ಅಗತ್ವವಿದೆ. ಧನ ಸಹಾಯ ಬೇಕಾಗಿದೆ. ನೆರವು ಸಿಗುವ ಭರವಸೆ ಇದೆ’ ಎಂದು ಜೇಕಬ್ ಅವರ ಪತ್ನಿ ಕ್ಯಾಥಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.