ADVERTISEMENT

ಕೋವಿಡ್ ಪರಿಹಾರ ನಿಧಿಗಾಗಿ ಭಾರತ–ಪಾಕ್ ಟೂರ್ನಿ: ಅಖ್ತರ್ ಸಲಹೆಗೆ ಕಪಿಲ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 11:57 IST
Last Updated 9 ಏಪ್ರಿಲ್ 2020, 11:57 IST
   

ನವದೆಹಲಿ: ಜಾಗತಿಕ ಪಿಡುಗು ಕೋವಿಡ್–19 ಪರಿಹಾರಕ್ಕಾಗಿಹಣ ಸಂಗ್ರಹಿಸಲು ಕ್ರಿಕೆಟ್‌ ಸರಣಿ ಆಯೋಜಿಸುವಂತೆಸಲಹೆ ನೀಡಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯಬ್‌ ಅಖ್ತರ್‌ ಅವರಿಗೆ ಕಪಿಲ್‌ ದೇವ್‌ ತಿರುಗೇಟು ನೀಡಿದ್ದಾರೆ. ಕ್ರಿಕೆಟ್‌ ಸಲುವಾಗಿ ಹಲವು ಜೀವಗಳನ್ನು ಸಂಕಷ್ಟಕ್ಕೆ ದೂಡುವುದು ಸರಿಯಲ್ಲ ಎಂದು ಕಪಿಲ್‌ಕಿಡಿಕಾರಿದ್ದಾರೆ.

ಕ್ರೀಡಾಂಗಣದಲ್ಲಿ ಕುಳಿತುಪಂದ್ಯ ವೀಕ್ಷಿಸಲುಜನರಿಗೆ ಅವಕಾಶ ನೀಡದೆ (ಮುಚ್ಚಿದ ಕ್ರೀಡಾಂಗಣದಲ್ಲಿ) ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ಮೂರು ಪಂದ್ಯಗಳ ಸರಣಿಆಯೋಜಿಸುವ ವಿಚಾರವನ್ನು ಅಖ್ತರ್‌ ಪ್ರಸ್ತಾಪಿಸಿದ್ದರು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕಪಿಲ್, ಇದು ಸಾಧ್ಯವಿಲ್ಲ ಎಂದಿದ್ದಾರೆ.

‘ಅಭಿಪ್ರಾಯ ವ್ಯಕ್ತಪಡಿಸುವ ಅರ್ಹತೆ ಅಖ್ತರ್‌ಗೆಇದೆ. ಆದರೆ, ಹಣ ಸಂಗ್ರಹಿಸಬೇಕಾದಅಗತ್ಯ ನಮಗಿಲ್ಲ. ನಮ್ಮಲ್ಲಿ ಸಾಕಷ್ಟು ಹಣವಿದೆ. ಈ ಬಿಕ್ಕಟ್ಟನ್ನು ಎದುರಿಸಲು ನಮ್ಮ ಅಧಿಕಾರಿಗಳು ಹೇಗೆ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬುದು ನಮಗೆ ಮುಖ್ಯ’ಎಂದು ಹೇಳಿದ್ದಾರೆ.

ADVERTISEMENT

‘ಆದಾಗ್ಯೂ, ಕೋವಿಡ್‌–19 ಪರಿಹಾರ ನಿಧಿಗೆ ಬಿಸಿಸಿಐ ಭಾರಿ ಮೊತ್ತವನ್ನು (51 ಕೋಟಿ ರೂ.) ದೇಣಿಗೆಯಾಗಿ ನೀಡಿದೆ. ಅಗತ್ಯವಿದ್ದರೆ ಮತ್ತಷ್ಟು ಹಣ ನೀಡುವ ಸಾಮರ್ಥ್ಯವನ್ನು ಬಿಸಿಸಿಐ ಹೊಂದಿದೆ. ಈ ರೀತಿಯಲ್ಲಿ ಹಣ ಸಂಗ್ರಹಿಸುವ ಅಗತ್ಯವಿಲ್ಲ. ಈಗಲೂ ಸಾಕಷ್ಟು ರಾಜಕಾರಣಿಗಳು ಸೋಂಕಿನ ವಿಚಾರವಾಗಿಕೆಸರೆರಚಾಟ ನಡೆಸುತ್ತಿದ್ದಾರೆ. ಅದು ನಿಲ್ಲಬೇಕಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಕೋವಿಡ್‌–19 ನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಅಷ್ಟು ಬೇಗನೆ ಸುಧಾರಿಸುವುದು ಅಸಾಧ್ಯವಾಗಿದೆ. ಪಂದ್ಯ ಆಯೋಜಿಸುವುದು ಎಂದರೆ ನಮ್ಮ ಕ್ರಿಕೆಟಿಗರನ್ನು ಅಪಾಯಕ್ಕೆ ತಳ್ಳುವುದಾಗಿದೆ. ಅದರ ಅಗತ್ಯ ಇಲ್ಲ’ ಎಂದು 1983 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.