ADVERTISEMENT

ವಿಶ್ವಕಪ್ ತಂಡದ ಆಟಗಾರ್ತಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರದಿಂದ ₹1 ಕೋಟಿ

ಪಿಟಿಐ
Published 3 ನವೆಂಬರ್ 2025, 9:26 IST
Last Updated 3 ನವೆಂಬರ್ 2025, 9:26 IST
<div class="paragraphs"><p>ವಿಕೆಟ್ ಉರುಳಿಸಿದ ಸಂಭ್ರಮದಲ್ಲಿ ಕ್ರಾಂತಿ ಗೌ</p></div>

ವಿಕೆಟ್ ಉರುಳಿಸಿದ ಸಂಭ್ರಮದಲ್ಲಿ ಕ್ರಾಂತಿ ಗೌ

   

ಚಿತ್ರ ಕೃಪೆ: @ABsay_ek

ಭೋ‍ಪಾಲ್: ಐಸಿಸಿ ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ತೋರಿ ಟ್ರೋಫಿ ಗೆದ್ದಿರುವ ಭಾರತ ತಂಡಕ್ಕೆ ಬಿಸಿಸಿಐ ₹51 ಕೋಟಿ ಬಹುಮಾನ ಘೋಷಣೆ ಮಾಡಿದೆ. ಈ ನಡುವೆ ವಿಶ್ವಕಪ್ ತಂಡದಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದು, ಉತ್ತಮ ಪ್ರದರ್ಶನ ತೋರಿದ ವೇಗಿ ಕ್ರಾಂತಿ ಗೌಡ್ ಅವರಿಗೆ ಮಧ್ಯಪ್ರದೇಶ ಸರ್ಕಾರ ₹1 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದೆ.

ADVERTISEMENT

ಭಾರತ ಮಹಿಳಾ ತಂಡ ನವಿ ಮುಂಬೈನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 52 ರನ್‌ಗಳ ಅಂತರದಲ್ಲಿ ಜಯ ಸಾಧಿಸಿ ತನ್ನ ಚೊಚ್ಚಲ ಟ್ರೋಫಿ ಗೆದ್ದುಕೊಂಡಿದೆ.

ಭಾರತ ತಂಡದ ಗೆಲುವಿನ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್, ‘ನಮ್ಮ ರಾಜ್ಯದ ಮಗಳು ಸೇರಿದಂತೆ ದೇಶದ ಹೆಣ್ಣು ಮಕ್ಕಳು ಭಾನುವಾರ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರೀತಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ’ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಯಾವ ರೀತಿ ಪ್ರಗತಿ ಸಾಧಿಸುತ್ತಿದೆಯೋ, ಅದೇ ರೀತಿ ಭಾರತದ ಹೆಣ್ಣು ಮಕ್ಕಳು ಕೂಡ ಮುಂದೆ ಸಾಗುತ್ತಿದ್ದಾರೆ ಎಂದು ಅವರು ಹೇಳಿದರು.

‘ಮಹಿಳಾ ವಿಶ್ವಕಪ್ ವಿಜೇತ ತಂಡದಲ್ಲಿ ನಮ್ಮ ಮಧ್ಯಪ್ರದೇಶದ ಛತ್ತರ್‌ಪುರದ ಮಗಳು ಕ್ರಾಂತಿ ಗೌಡ್ ಕೂಡ ಇದ್ದರು. ನಾನು ಕ್ರಾಂತಿಯನ್ನು ಅಭಿನಂದಿಸುತ್ತೇನೆ ಮತ್ತು ರಾಜ್ಯ ಸರ್ಕಾರದಿಂದ ಅವರಿಗೆ ₹1 ಕೋಟಿ ಪ್ರೋತ್ಸಾಹ ಧನ ನೀಡುತ್ತೇನೆ’ ಎಂದು ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.