ADVERTISEMENT

ಭಾರತಕ್ಕೆ ಧೋನಿ ಇದ್ದಂತೆ ಇಂಗ್ಲೆಂಡ್‌ಗೆ ಮಾರ್ಗನ್:‌ ದಿನೇಶ್‌ ಕಾರ್ತಿಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ನವೆಂಬರ್ 2021, 16:40 IST
Last Updated 2 ನವೆಂಬರ್ 2021, 16:40 IST
ಮಹೇಂದ್ರ ಸಿಂಗ್‌ ಧೋನಿ ಹಾಗೂ ಎಯಾನ್‌ ಮಾರ್ಗನ್‌
ಮಹೇಂದ್ರ ಸಿಂಗ್‌ ಧೋನಿ ಹಾಗೂ ಎಯಾನ್‌ ಮಾರ್ಗನ್‌   

ನವದೆಹಲಿ:ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 43ನೇ ಜಯ ಸಾಧಿಸಿಅತಿಹೆಚ್ಚು ಪಂದ್ಯಗಳನ್ನು ಗೆದ್ದನಾಯಕ ಎನಿಸಿರುವ ಇಂಗ್ಲೆಂಡ್‌ನ ಎಯಾನ್‌ ಮಾರ್ಗನ್‌ ನಾಯಕತ್ವದ ಬಗ್ಗೆಭಾರತದ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ದಿನೇಶ್‌ ಕಾರ್ತಿಕ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದುವರೆಗೆ ಈ ದಾಖಲೆಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಹೆಸರಿನಲ್ಲಿತ್ತು. ಧೋನಿ, ಚುಟುಕು ಕ್ರಿಕೆಟ್‌ನಲ್ಲಿ 42ಗೆಲುವುಗಳನ್ನು ಕಂಡಿದ್ದಾರೆ.

ಸೋಮವಾರ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 26 ರನ್‌ ಜಯ ಸಾಧಿಸಿತು. ಇದರೊಂದಿಗೆ ಮಾರ್ಗನ್‌ ಹೊಸ ದಾಖಲೆ ಬರೆದರು.

ADVERTISEMENT

ಮಾರ್ಗನ್‌ ಸಾಧನೆ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕಾರ್ತಿಕ್‌,ಭಾರತಕ್ಕೆ‌ ಎಂಎಸ್ ಧೋನಿ ಇದ್ದಂತೆ ಇಂಗ್ಲೆಂಡ್‌ಗೆ ಎಯಾನ್‌ ಮಾರ್ಗನ್.‌ ತುಂಬಾ ಚೆನ್ನಾಗಿ ಮುನ್ನಡೆಸಿದ್ದಾರೆ. ಇಂಗ್ಲೆಂಡ್‌ ತಂಡ ವಿಶ್ವಕಪ್‌ನಲ್ಲಿ ಬಲಿಷ್ಠವಾಗಿದೆ ಎಂದುಅಭಿಪ್ರಾಯಪಟ್ಟಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಮೊದಲ ಗುಂಪಿನಲ್ಲಿರುವ ಇಂಗ್ಲೆಂಡ್‌ ತಂಡ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್‌ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಕಳೆದ ಬಾರಿಯ (2019) ಏಕದಿನ ಕ್ರಿಕೆಟ್‌ ವಿಶ್ವಕಪ್‌ ಮುಡಿಗೇರಿಸಿಕೊಂಡಿರುವ ಮಾರ್ಗನ್‌ ಪಡೆ, ಈ ಬಾರಿ ಚುಟುಕು ವಿಶ್ವಕಪ್‌ ಎತ್ತಿಹಿಡಿಯುವ ನೆಚ್ಚಿನ ತಂಡವೆನಿಸಿದೆ.

ಇಂಗ್ಲೆಂಡ್‌ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ(ನವೆಂಬರ್‌6ರಂದು) ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.