ನೇಪಾಳ ಕ್ರಿಕೆಟ್ ತಂಡದ ಆಟಗಾರರ ಸಂಭ್ರಮ
(ಚಿತ್ರ ಕೃಪೆ: X/@CricketNep)
ಶಾರ್ಜಾ: ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲೂ 90 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ನೇಪಾಳ ಚಾರಿತ್ರಿಕ ಸಾಧನೆ ಮಾಡಿದೆ.
ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ 2-0ರ ಅಂತರದಲ್ಲಿ ವಶಪಡಿಸಿಕೊಂಡಿದೆ.
ಶಾರ್ಜಾದಲ್ಲಿ ನಡೆಯುತ್ತಿರುವ ಸರಣಿಯ ಮೊದಲ ಪಂದ್ಯದಲ್ಲೂ ನೇಪಾಳ 19 ರನ್ ಅಂತರದ ಜಯ ಗಳಿಸಿತ್ತು. ಐಸಿಸಿ ಪೂರ್ಣ ಸದಸ್ಯತ್ವ ಪಡೆದ ರಾಷ್ಟ್ರದ ವಿರುದ್ಧ ಗಳಿಸಿದ ಮೊದಲ ಜಯ ಇದಾಗಿತ್ತು.
ಇದೀಗ ಸೋಮವಾರ ನಡೆದ ಎರಡನೇ ಟಿ20 ಪಂದ್ಯದಲ್ಲೂ ನೇಪಾಳ ಅಮೋಘ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ನೇಪಾಳ ಆರು ವಿಕೆಟ್ ನಷ್ಟಕ್ಕೆ 173 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಆರಂಭಿಕ ಆಸಿಫ್ ಶೇಕ್ 68 ರನ್ ಗಳಿಸಿ ಔಟಾಗದೆ ಉಳಿದರು. ಮಧ್ಯಮ ಕ್ರಮಾಂಕದಲ್ಲಿ ಸುಂದೀಪ್ ಜೋರಾ ಸಹ ಅರ್ಧಶತಕದ (63) ಸಾಧನೆ ಮಾಡಿದರು.
ಈ ಗುರಿ ಬೆನ್ನಟ್ಟಿದ ವಿಂಡೀಸ್ 17.1 ಓವರ್‌ಗಳಲ್ಲೇ 83 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ನೇಪಾಳ ಪರ ನಿಖರ ದಾಳಿ ಸಂಘಟಿಸಿದ ಮೊಹಮ್ಮದ್ ಆದಿಲ್ ಅಲಂ ನಾಲ್ಕು ಮತ್ತು ಕುಶಾಲ್ ಭುರ್ತೆಲ್ ಮೂರು ವಿಕೆಟ್ ಗಳಿಸಿದರು.
ಸರಣಿಯ ಅಂತಿಮ ಪಂದ್ಯ ಇಂದು (ಮಂಗಳವಾರ) ನಡೆಯಲಿದೆ. ಈ ಪಂದ್ಯವನ್ನು ಗೆದ್ದರೆ ನೇಪಾಳ ಕ್ವೀನ್ ಸ್ವೀಪ್ ಸಾಧನೆಗೈಯಲಿದೆ.
ನೇಪಾಳ ಕ್ರಿಕೆಟ್ ತಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.