
ಕೊಲಂಬೊ: ‘ಭಾರತ ವಿರುದ್ಧ ಟಿ20 ವಿಶ್ವಕಪ್ ಪಂದ್ಯ ಬಹಿಷ್ಕರಿಸುವ ನಿರ್ಧಾರ ನಮ್ಮ ಸರ್ಕಾರದ್ದು. ನಮ್ಮ ನಿಯಂತ್ರಣದಲ್ಲೇನೂ ಇಲ್ಲ’ ಎಂದು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಅವರು ತಮ್ಮ ದೇಶದ ಕ್ರಿಕೆಟ್ ಮಂಡಳಿಯ ನಿರ್ಧಾರಕ್ಕೆ ಧ್ವನಿಗೂಡಿಸಿದ್ದಾರೆ.
ಪಾಕಿಸ್ತಾನ ಸರ್ಕಾರ ಕಳೆದ ಭಾನುವಾರ ಫೆ.15ರ ಪಂದ್ಯ ಬಹಿಷ್ಕರಿಸುವ ನಿರ್ಧಾರ ತಳೆದಿತ್ತು. ‘ಸರ್ಕಾರ ಏನು ಹೇಳುತ್ತದೆಯೊ ಅದನ್ನು ಪಾಲಿಸುತ್ತೇವೆ’ ಎಂದು ಅವರು ನಾಯಕರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ನಾಕೌಟ್‌ನಲ್ಲಿ ಮತ್ತೆ ಎದುರಾಗುವ ಸಂದರ್ಭ ಬಂದರೆ ನಮ್ಮ ಸರ್ಕಾರ ಏನು ಹೇಳುತ್ತದೆಯೊ ಅದರಂತೆ ನಡೆಯುತ್ತೇವೆ’ ಎಂದು ಸಲ್ಮಾನ್ ಹೇಳಿದ್ದಾರೆ.
ಹೋದ ವಿಶ್ವಕಪ್‌ನಲ್ಲಿ ಅಮೆರಿಕಕ್ಕೆ ಸೋತ ಬಗ್ಗೆ ಕೇಳಿದಾಗ, ‘ಹೌದು ನಾವು ಸೋತಿದ್ದೆವು. ಆದರೆ ಅದು ಇತಿಹಾಸ. ಇದು ಹೊಸ ವಿಶ್ವಕಪ್. ನಮ್ಮ ತಂಡ ಹೊಸದು. ಹೊಸ ಸಂಯೋಜನೆ ಹೊಂದಿದೆ. ನಾವು ಆಡಲು ಕಾತರರಾಗಿದ್ದೇವೆ’ ಎಂದಿದ್ದಾರೆ.
ಭಾರತ ವಿರುದ್ಧ ಪಂದ್ಯ ಬಹಿಷ್ಕರಿಸುವ ನಿರ್ಧಾರ ಸೂಕ್ತವಾದುದು. ಪ್ರಜ್ಞಾಪೂರ್ವಕವಾಗಿ ಕೈಗೊಂಡ ನಿರ್ಧಾರ. ನಾವು ಬಾಂಗ್ಲಾದೇಶದ ಬೆನ್ನಿಗಿದ್ದೇವೆ.– ಶಹಬಾಜ್ ಶರೀಫ್, ಪಾಕ್ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.