ADVERTISEMENT

ವಿರಾಟ್ ದಾಖಲೆ ಮುರಿದು ರೋಹಿತ್ ಸಾಧನೆ ಸರಿಗಟ್ಟಿದ ಬಾಬರ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 13:02 IST
Last Updated 1 ಅಕ್ಟೋಬರ್ 2021, 13:02 IST
ಬಾಬರ್ ಆಜಂ
ಬಾಬರ್ ಆಜಂ   

ನವದೆಹಲಿ: ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ನಿಕಟ ಪೈಪೋಟಿ ಒಡ್ಡುತ್ತಿರುವ ಪಾಕಿಸ್ತಾನದ ಬಾಬರ್ ಆಜಂ ಮಗದೊಂದು ದಾಖಲೆ ಬರೆದಿದ್ದಾರೆ.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ನ್ಯಾಷನಲ್ ಟಿ20 ಕಪ್‌ನಲ್ಲಿ ಶತಕ ಬಾರಿಸಿರುವ ಬಾಬರ್, ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ ಆರನೇ ಶತಕ ಗಳಿಸಿರುವ ಬಾಬರ್ ಈಗ ರೋಹಿತ್ ಶರ್ಮಾ ಸಾಧನೆಯನ್ನು ಸರಿಗಟ್ಟಿದ್ದಾರೆ.

ಈ ಮೂಲಕ ಏಷ್ಯಾದ ಅಗ್ರ ಟಿ20 ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ. 193ನೇ ಪಂದ್ಯದಲ್ಲಿ ಬಾಬರ್ ಈ ಸಾಧನೆ ಮಾಡಿದ್ದಾರೆ.

ಸೆಂಟ್ರಲ್ ಪಂಜಾಬ್ ತಂಡವನ್ನು ಮುನ್ನಡೆಸುತ್ತಿರುವ ಬಾಬರ್ 63 ಎಸೆತಗಳಲ್ಲಿ 105 ರನ್ ಗಳಿಸಿದರು.

ಟಿ20 ಮಾದರಿಯಲ್ಲಿ ರೋಹಿತ್ ಶರ್ಮಾ 353 ಪಂದ್ಯಗಳಲ್ಲಿ ಆರು ಮತ್ತು ವಿರಾಟ್ ಕೊಹ್ಲಿ 315 ಪಂದ್ಯಗಳಲ್ಲಿ ಐದು ಶತಕಗಳನ್ನು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.