
ನಿಸಾಂಕ
ಪಲೆಕೆಲೆ (ಶ್ರೀಲಂಕಾ): ಪಥುಮ್ ನಿಸಾಂಕ ಗಳಿಸಿದ ಶತಕದ ಬಲದಿಂದ ಶ್ರೀಲಂಕಾ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಬಾರಿಸಿತು. ಇದರೊಂದಿಗೆ ಸೂಪರ್ ಎಂಟರ ಹಂತಕ್ಕೆ ರಹದಾರಿ ಪಡೆಯಿತು. ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಹಾದಿ ಕಠಿಣವಾಯಿತು.
ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 182 ರನ್‌ಗಳ ಗುರಿ ಬೆನ್ನಟ್ಟಿದ ಆತಿಥೇಯ ತಂಡವು ಇನಿಂಗ್ಸ್‌ನಲ್ಲಿ ಇನ್ನೂ 2 ಓವರ್‌ಗಳು ಉಳಿದಂತೆಯೇ 8 ವಿಕೆಟ್‌ಗಳಿಂದ ಗೆದ್ದಿತು. ನಿಸಾಂಕ (ಅಜೇಯ 100; 52ಎಸೆತ) ಪ್ರಸಕ್ತ ಟೂರ್ನಿಯ ಮೊದಲ ಶತಕ ಬಾರಿಸಿ ದರು. ಕುಸಾಲ ಮೆಂಡಿಸ್ (51; 38ಎ) ಅವರು ಅರ್ಧಶತಕದ ಕಾಣಿಕೆ ನೀಡಿದರು.
ಡಿ ಗುಂಪಿನಲ್ಲಿ ಸತತ ಮೂರು ಜಯ ಸಾಧಿಸಿದ ಶ್ರೀಲಂಕಾ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಎರಡು ಪಂದ್ಯ ಗೆದ್ದಿರುವ ಜಿಂಬಾಬ್ವೆ (4) ಎರಡನೇ ಸ್ಥಾನದಲ್ಲಿದೆ. ತನ್ನ ಪಾಲಿನಲ್ಲಿ ಇನ್ನೂ ಉಳಿದಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಸೂಪರ್ 8 ಪ್ರವೇಶಿಸಲಿದೆ. ಆಸ್ಟ್ರೇಲಿಯಾ 3ರಲ್ಲಿ ಎರಡು ಸೋತು, ಒಂದರಲ್ಲಿ ಜಯಿಸಿದೆ. 2 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಕೊನೆಯ ಪಂದ್ಯದಲ್ಲಿ
ಒಮಾನ್ ವಿರುದ್ಧ ಆಡಬೇಕಿದೆ. ಅದರಲ್ಲಿ ಉತ್ತಮ ರನ್‌ರೇಟ್‌ನಿಂದ ಗೆಲ್ಲಬೇಕು. ಜಿಂಬಾಬ್ವೆ ತನ್ನ ಎರಡೂ ಪಂದ್ಯಗಳಲ್ಲಿ ಸೋಲಬೇಕು. ಆಗ ಆಸ್ಟ್ರೇಲಿಯಾಕ್ಕೆ ಒಂದು ಅವಕಾಶ ಸಿಗಬಹುದು.
ಮಾರ್ಷ್–ಹೆಡ್ ಜತೆಯಾಟ: ಮಾರ್ಷ್
(54; 27ಎ, 4x8, 6x2) ಮತ್ತು ಹೆಡ್ (56; 29ಎ, 4x7, 6x3) ಅವರು ಮೊದಲ ವಿಕೆಟ್ ಜತೆಯಾಟದಲ್ಲಿ 104 ರನ್ ಸೇರಿಸಿದರು. ಈ ಅಡಿಪಾಯದ ಮೇಲೆ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 181 ರನ್ ಗಳಿಸಿತು.
ಆದರೆ ಇವರಿಬ್ಬರ ನಂತರ ಉಳಿದ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಆಡಲಿಲ್ಲ. ದುಶಾನ್ ಹೇಮಂತ (37ಕ್ಕೆ3) ಮತ್ತು ದುಷ್ಮಂತ ಚಮೀರಾ (36ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ಮುಂದೆ ಮಧ್ಯಮ ಕ್ರಮಾಂಕವು ಕುಸಿಯಿತು. ಆರು ಬ್ಯಾಟರ್‌ಗಳು ಒಂದಂಕಿ ಗಳಿಸಿ ನಿರ್ಗಮಿಸಿದರು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 181 (ಮಿಚೆಲ್ ಮಾರ್ಷ್ 54, ಟ್ರಾವಿಸ್ ಹೆಡ್ 56, ಜೋಶ್ ಇಂಗ್ಲಿಸ್ 27, ಗ್ಲೆನ್ ಮ್ಯಾಕ್ಸ್‌ವೆಲ್ 22, ದುಷ್ಮಂತ್ ಚಮೀರಾ 36ಕ್ಕೆ2, ದುಶಾನ್ ಹೇಮಂತ 37ಕ್ಕೆ3) ಶ್ರೀಲಂಕಾ: 18 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 184 (ಪಥುಮ್ ನಿಸಾಂಕ ಔಟಾಗದೇ 100, ಕುಸಾಲ ಮೆಂಡಿಸ್ 51, ಪವನ್ ರತ್ನಾಯಕೆ ಔಟಾಗದೇ 28, ಮಾರ್ಕಸ್ ಸ್ಟೊಯಿನಿಸ್ 46ಕ್ಕೆ2) ಫಲಿತಾಂಶ: ಶ್ರೀಲಂಕಾ ತಂಡಕ್ಕೆ 8 ವಿಕೆಟ್‌ಗಳ ಜಯ
ಪಂದ್ಯದ ಆಟಗಾರ: ಪಥುಮ್ ನಿಸಾಂಕ
100* ರನ್
52 ಎಸೆತ
10 ಬೌಂಡರಿ
5 ಸಿಕ್ಸರ್
1 ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಾದ ಮೊದಲ ಶತಕವಿದು. ಪಾಕಿಸ್ತಾನದ ಉಮರ್ ಅಕ್ಮಲ್ 2014ರಲ್ಲಿ ಮೀರ್‌ಪುರದಲ್ಲಿ 94 ರನ್ ಗಳಿಸಿದ್ದು, ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.