ADVERTISEMENT

ಪಾಕ್‌ ತಂಡದ ಕೋಚ್‌ ಹುದ್ದೆ ರೇಸ್‌ನಲ್ಲಿ ಮಿಸ್ಬಾ, ವಖಾರ್

ಪಿಟಿಐ
Published 31 ಆಗಸ್ಟ್ 2019, 19:30 IST
Last Updated 31 ಆಗಸ್ಟ್ 2019, 19:30 IST
ಮಿಸ್ಬಾ ಉಲ್‌ ಹಕ್‌
ಮಿಸ್ಬಾ ಉಲ್‌ ಹಕ್‌   

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೊಸ ಕೋಚ್‌ಗಳನ್ನು ಮುಂದಿನ ವಾರ ಆಯ್ಕೆ ಮಾಡಲಿದ್ದು ಮಿಸ್ಬಾ ಉಲ್ ಹಕ್ ಮತ್ತು ವಖಾರ್ ಯೂನಿಸ್ ಅವರು ಕ್ರಮವಾಗಿ ಮುಖ್ಯ ಕೋಚ್ ಮತ್ತು ಬೌಲಿಂಗ್‌ ಕೋಚ್ ಹುದ್ದೆಯ ರೇಸ್‌ನಲ್ಲಿದ್ದಾರೆ.

ಮೊಹಸಿನ್ ಖಾನ್ ಅವರು ಆಯ್ಕೆ ಸಮಿತಿಯ ಮುಖ್ಯಸ್ಥರಾಗುವ ಸಾಧ್ಯತೆ ಇದ್ದು ಸಮಿತಿಯಲ್ಲಿ ಐವರು ಇರುವರು. ಕೋಚ್ ಮತ್ತು ತಂಡದ ಸಹಾಯಕ ಸಿಬ್ಬಂದಿ ಹುದ್ದೆಗಾಗಿ ಅರ್ಜಿ ಸಲ್ಲಿಸಿದವರನ್ನು ಸಮಿತಿ ಸಂದರ್ಶನಕ್ಕೆ ಕರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT