ADVERTISEMENT

ಸೋಲಿನ ಭೀತಿಯನ್ನು ಮನಸ್ಸಿನಿಂದ ತೆಗೆದುಹಾಕಿ: ಸರ್ಫರಾಜ್‌ಗೆ ಇಮ್ರಾನ್‌ ಖಾನ್ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 9:38 IST
Last Updated 16 ಜೂನ್ 2019, 9:38 IST
   

ಲಾಹೋರ್: ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಭಾರತ- ಪಾಕಿಸ್ತಾನ ನಡುವಿನ ಹಣಾಹಣಿಗೆ ಕ್ಷಣಗಣನೆ ನಡೆಯುತ್ತಿರುವ ಹೊತ್ತಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ಅಹಮದ್‌ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಲಹೆ ನೀಡಿದ್ದಾರೆ.

ಸರಣಿ ಟ್ವೀಟ್ ಮಾಡಿದ ಮಾಜಿ ಕ್ರಿಕೆಟಿಗ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಾನು ಕ್ರಿಕೆಟ್ ವೃತ್ತಿ ಆರಂಭಿಸಿದಾಗ ಶೇ. 70 ಪ್ರತಿಭೆ ಮತ್ತು ಶೇ. 30 ಸಂಕಲ್ಪದಿಂದ ಗೆಲುವು ಸಾಧಿಸಬಹುದು ಎಂದು ಅಂದುಕೊಂಡಿದ್ದೆ. ನಾನು ಕ್ರಿಕೆಟ್ ಆಡಲು ಶುರು ಮಾಡಿದಾಗ ಇದು 50-50 ಎಂಬುದು ಗೊತ್ತಾಯಿತು. ಇದೀಗ ನಾನು ನನ್ನ ಗೆಳೆಯ ಗವಾಸ್ಕರ್ ಹೇಳಿದಂತೆ ಗೆಲುವು ಸಾಧಿಸಲು ಶೇ.60 ಮಾನಸಿಕ ಧೈರ್ಯ ಮತ್ತು ಶೇ. 40 ಪ್ರತಿಭೆ ಬೇಕು ಎಂಬ ಮಾತನ್ನು ನಾನು ಒಪ್ಪುತ್ತೇನೆ. ಇವತ್ತು ಮನಸ್ಸಿನ ಸಂಕಲ್ಪದ ಪಾತ್ರ ಶೇ. 60ಕ್ಕಿಂತ ಹೆಚ್ಚು ಇರಬೇಕು.

ಇವತ್ತು ಎರಡೂ ತಂಡಗಳು ಮಾನಸಿಕ ಒತ್ತಡದಲ್ಲಿದ್ದು, ಅವರ ಮನಸ್ಸಿನ ಸಂಕಲ್ಪಕ್ಕೆ ಅನುಸಾರವಾಗಿ ಇವತ್ತಿನ ಪಂದ್ಯದ ಫಲಿತಾಂಶವಿರುತ್ತದೆ. ಸರ್ಫರಾಜ್‌ನಂತ ಧೈರ್ಯಶಾಲಿ ನಾಯಕ ನಮ್ಮ ತಂಡಕ್ಕಿರುವುದರಿಂದ, ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ.

ADVERTISEMENT

ಈ ಹೊತ್ತಲ್ಲಿ ಮನಸ್ಸು ಹೆಚ್ಚಿನ ಪ್ರಭುತ್ವ ಸಾಧಿಸುವುದರಿಂದ ಸೋಲಿನ ಭೀತಿಯನ್ನು ಮನಸ್ಸಿನಿಂದ ತೆಗೆದು ಹಾಕಬೇಕು.ಸೋಲಿನ ಭೀತಿ ನಕಾರಾತ್ಮಕ, ರಕ್ಷಣಾತ್ಮಕ ಕಾರ್ಯತಂತ್ರ ಮತ್ತು ಗಂಭೀರ ತಪ್ಪುಗಳಾಗುವಂತೆ ಮಾಡುತ್ತದೆ. ಹಾಗಾಗಿ ಸರ್ಫರಾಜ್ ಮತ್ತು ಪಾಕಿಸ್ತಾನ ತಂಡಕ್ಕೆ ನನ್ನ ಸಲಹೆ ಈ ರೀತಿ ಇದೆ.

ಗೆಲ್ಲಲ್ಲೇಬೇಕು ಎಂಬ ಕಾರ್ಯತಂತ್ರ ರೂಪಿಸುವಾಗ ಸರ್ಫರಾಜ್ ನುರಿತ ದಾಂಡಿಗ ಮತ್ತು ಬೌಲರ್‌ಗಳನ್ನು ಆಯ್ಕೆ ಮಾಡಬೇಕು. ಒತ್ತಡವು ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಪಿಚ್ ಒದ್ದೆಯಾಗಿರದಿದ್ದರೆ ಸರ್ಫರಾಜ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಬೇಕು.

ಭಾರತ ನೆಚ್ಚಿನ ತಂಡಆಗಿದ್ದರೂ ಸೋಲುವ ಭೀತಿಯಿಂದ ದೂರವಿರಿ.ನಿಮ್ಮಿಂದಾಗುವ ರೀತಿಯಲ್ಲಿ ಕೊನೆಯ ಬಾಲ್ ತನಕ ಹೋರಾಡಿ. ಕ್ರೀಡಾಸ್ಫೂರ್ತಿಯಿಂದಲೇ ನಾವು ಏನೇ ಫಲಿತಾಂಶ ಬಂದರೂ ಸ್ವೀಕರಿಸುತ್ತೇವೆ.ದೇಶದ ಪ್ರಾರ್ಥನೆ ನಿಮ್ಮೊಂದಿಗಿದೆ, ಒಳ್ಳೆಯದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.