ADVERTISEMENT

ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 5 ಸಾವಿರ ರನ್: 6ನೇ ಸ್ಥಾನದಲ್ಲಿ ಡಿ ಕಾಕ್

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 9:12 IST
Last Updated 5 ಫೆಬ್ರುವರಿ 2020, 9:12 IST
   

ನ್ಯೂಲ್ಯಾಂಡ್ಸ್‌: ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿತಮ್ಮ ತಂಡಕ್ಕೆ 7 ವಿಕೆಟ್‌ ಜಯ ತಂದುಕೊಟ್ಟ ದಕ್ಷಿಣ ಆಫ್ರಿಕಾ ನಾಯಕ ಕ್ವಿಂಟನ್‌ ಡಿ ಕಾಕ್‌, ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 5 ಸಾವಿರ ರನ್ ಕಲೆಹಾಕಿದ ವಿಶ್ವದ ಆರನೇ ಬ್ಯಾಟ್ಸ್‌ಮನ್ ಎನಿಸಿದರು.

ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 258 ರನ್ ಗಳಿಸಿತ್ತು. ಈ ಮೊತ್ತವನ್ನು ಆತಿಥೇಯ ದಕ್ಷಿಣ ಆಫ್ರಿಕಾ 47.4 ಓವರ್‌ಗಳಲ್ಲಿ ತಲುಪಿ ಗೆಲುವಿನ ನಗೆ ಬೀರಿತು. ಡಿ ಕಾಕ್‌107 ರನ್‌ ಗಳಿಸಿದರೆ, ತೆಂಬಾ ಬವುಮಾ 98 ರನ್ ಗಳಿಸಿ ನೆರವಾದರು.

ಎರಡು ಮತ್ತು ಮೂರನೇ ಏಕದಿನ ಪಂದ್ಯಗಳು ಕ್ರಮವಾಗಿ ಫೆ.7 ಮತ್ತು ಫೆ.9 ರಂದು ನಡೆಯಲಿವೆ.

ADVERTISEMENT

ಡಿ ಕಾಕ್‌ ದಾಖಲೆ
ಈ ಪಂದ್ಯಕ್ಕೂ ಮುನ್ನ 115 ಇನಿಂಗ್ಸ್‌ಗಳಿಂದ 4,907 ರನ್‌ ಗಳಿಸಿದ್ದ ಡಿಕಾಕ್‌, ಇಲ್ಲಿ 93 ರನ್‌ ಗಳಿಸಿದ್ದಾಗ ಏಕದಿನ ಕ್ರಿಕೆಟ್‌ನಲ್ಲಿ ಐದು ಸಾವಿರ ರನ್‌ ಪೂರೈಸಿದರು. ಆ ಮೂಲಕ ಈ ಮಾದರಿಯಲ್ಲಿ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ 6ನೇ ಮತ್ತು ದಕ್ಷಿಣ ಆಫ್ರಿಕಾ ಪರ ಎರಡನೇಬ್ಯಾಟ್ಸ್‌ಮನ್‌ ಎನಿಸಿಕೊಂಡರು.

ದಕ್ಷಿಣ ಆಫ್ರಿಕಾದವರೇ ಆದ ಹಾಶೀಂ ಆಮ್ಲಾ 101ನೇ ಇನಿಂಗ್ಸ್‌ನಲ್ಲಿ 5 ಸಾವಿರ ರನ್‌ ಗಳಿಸಿದ ದಾಖಲೆ ಹೊಂದಿದ್ದಾರೆ. 114 ಇನಿಂಗ್ಸ್‌ಗಳಲ್ಲಿ ಇಷ್ಟು ರನ್‌ ಗಳಿಸಿರುವ ವೆಸ್ಟ್‌ ಇಂಡೀಸ್‌ನ ವಿವಿಯನ್‌ ರಿಚರ್ಡ್ಸನ್‌ ಹಾಗೂ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ (115) ಹಾಗೂ ಇಂಗ್ಲೆಂಡ್‌ನ ಜೊ ರೂಟ್‌ (116) ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.