ADVERTISEMENT

ತಂಡಗಳು ವೃತ್ತಿಪರವಾಗಿರಬೇಕು: ರಾಜಸ್ಥಾನ್ ವಿರುದ್ಧವೇ ಕ್ಯಾಪ್ಟನ್ ಸಂಜು ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2022, 15:30 IST
Last Updated 25 ಮಾರ್ಚ್ 2022, 15:30 IST
ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್   

ಮುಂಬೈ: ರಾಜಸ್ಥಾನ್ ರಾಯಲ್ಸ್ ಸೋಷಿಯಲ್ ಮೀಡಿಯಾ ಟೀಮ್ ವಿರುದ್ಧ ಗರಂ ಆಗಿರುವ ನಾಯಕ ಸಂಜು ಸ್ಯಾಮ್ಸನ್, ತಂಡಗಳು ವೃತ್ತಿಪರವಾಗಿರಬೇಕು ಎಂದು ಹೇಳಿದ್ದಾರೆ.

ಏನಿದು ಘಟನೆ?
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ರಾಜಸ್ಥಾನ್ ರಾಯಲ್ಸ್, ಹಾಸ್ಯಾಭಿರುಚಿಯ ಪೋಸ್ಟ್‌ಗಳನ್ನು ಹಾಕುವ ಮೂಲಕ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಆದರೆ ಮಿತಿ ಮೀರಿ ವರ್ತಿಸಿರುವ ರಾಜಸ್ಥಾನ್ ರಾಯಲ್ಸ್ ಟ್ವಿಟರ್ ಆಡ್ಮಿನ್, ನಾಯಕನನ್ನು ಟ್ರೋಲ್‌ಗೆ ಗುರಿಯಾಗಿರಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಬಸ್ಸಿನಲ್ಲಿ ಸಂಚರಿಸುತ್ತಿರುವಸಂಜು ಸ್ಯಾಮ್ಸನ್ ಚಿತ್ರವನ್ನು ಎಡಿಟ್ ಮಾಡಿರುವ ಆಡ್ಮಿನ್, ಎಷ್ಟು ಸುಂದರವಾಗಿ ಗೋಚರಿಸುತ್ತೀರಾ ? ಎಂಬ ಅಡಿಬರಹವನ್ನು ನೀಡಿದ್ದಾರೆ.

ಇದು ಸಂಜು ಕೋಪಕ್ಕೆ ಕಾರಣವಾಗಿದ್ದು, 'ಇವೆಲ್ಲ ಗೆಳೆಯರ ಮಧ್ಯೆ ಸರಿಯಿರುತ್ತದೆ. ಆದರೆ ತಂಡಗಳು ವೃತ್ತಿಪರವಾಗಿರಬೇಕು' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಕ್ಷಣವೇ ರಾಜಸ್ಥಾನ್ ರಾಯಲ್ಸ್, ವಿವಾದಿತ ಟ್ವೀಟ್ ಅನ್ನು ಅಳಿಸಿ ಹಾಕಿದೆ. ಈ ಕುರಿತು ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಹೊಸ ಸೋಷಿಯಲ್ ಮೀಡಿಯಾ ತಂಡವನ್ನು ನೇಮಕಗೊಳಿಸುವುದಾಗಿ ಘೋಷಿಸಿದೆ.

ಅಲ್ಲದೆ ತಂಡದಲ್ಲಿ ಯಾವುದೇ ಭಿನ್ನಮತವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಸಿದ್ಧರಾಗುತ್ತಿದ್ದೇವೆ ಎಂದು ಹೇಳಿದೆ.

ಸಂಜು ಅವರಿಗೆ ಬೆಂಬಲ ಸೂಚಿಸಿ ರಾಜಸ್ಥಾನ್ ರಾಯಲ್ಸ್ ತಂಡದವರೇ ಆಗಿರುವ ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಕೂಡ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.