ADVERTISEMENT

ಮಣಿಪುರ ತಂಡಕ್ಕೆ ಕರ್ನಾಟಕದ ಕ್ರಿಕೆಟಿಗ ರಾಜೂ ಭಟ್ಕಳ ಫೀಲ್ಡಿಂಗ್‌ ಕೋಚ್‌

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 13:15 IST
Last Updated 2 ಜನವರಿ 2022, 13:15 IST
ರಾಜೂ ಭಟ್ಕಳ
ರಾಜೂ ಭಟ್ಕಳ   

ಹುಬ್ಬಳ್ಳಿ: ಕರ್ನಾಟಕದ ಕ್ರಿಕೆಟಿಗ ರಾಜೂ ಭಟ್ಕಳ ಅವರು ಮಣಿಪುರ ರಣಜಿ ತಂಡದ ಫೀಲ್ಡಿಂಗ್‌ ಕೋಚ್‌ ಆಗಿ ನೇಮಕವಾಗಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ಮತ್ತು ಬಲಗೈ ಮಧ್ಯಮ ವೇಗದ ಬೌಲರ್‌ ಧಾರವಾಡದ ರಾಜು, ಕರ್ನಾಟಕ ರಣಜಿ ತಂಡದಲ್ಲಿ ಆಡಿದ್ದರು. ಸ್ಥಳೀಯವಾಗಿ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌, ಬೆಂಗಳೂರಿನಲ್ಲಿ ಮಲ್ಲೇಶ್ವರಂ ಜಿಮ್ಖಾನಾ ಮತ್ತು ಜವಾನ್ಸ್‌ ಕ್ರಿಕೆಟ್‌ ಕ್ಲಬ್‌ಗಳನ್ನು ಪ್ರತಿನಿಧಿಸಿದ್ದರು.

ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ ಮಲ್ನಾಡ್‌ ಗ್ಲಾಡಿಯೇಟರ್ಸ್‌ ಮತ್ತು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಆಡಿದ್ದರು. ಚಾಂಪಿಯನ್ಸ್‌ ಲೀಗ್‌ ಟೂರ್ನಿಯಲ್ಲೂ ಕಣಕ್ಕಿಳಿದಿದ್ದರು. 36 ವರ್ಷದ ರಾಜೂ ದೇಶಿ ಟೂರ್ನಿಗಳಲ್ಲಿ ಎರಡು ಪ್ರಥಮ ದರ್ಜೆ, 21 ಲಿಸ್ಟ್‌ ‘ಎ’ ಮತ್ತು 20 ಟಿ–20 ಪಂದ್ಯಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ.

ADVERTISEMENT

‘ದೇಶಿ ಕ್ರಿಕೆಟ್‌ನಲ್ಲಿ ಗಮನ ಸೆಳೆಯುತ್ತಿರುವ ಮಣಿಪುರ ತಂಡಕ್ಕೆ ಕೋಚ್‌ ಆಗಿದ್ದು ಸಂತೋಷ ನೀಡಿದೆ. ಅಲ್ಲಿ ಕ್ರಿಕೆಟ್‌ ಬೆಳವಣಿಗೆಗೆ ನನ್ನ ಶಕ್ತಿ ಮೀರಿ ಪ್ರಯತ್ನಿಸುವೆ’ ಎಂದು ರಾಜೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.