ADVERTISEMENT

ಇಂಗ್ಲೆಂಡ್‌ನಲ್ಲಿ ಅತ್ಯಾಚಾರ ಪ್ರಕರಣ: ಆರೋಪಿ ಪಾಕಿಸ್ತಾನ ಕ್ರಿಕೆಟಿಗ ಅಮಾನತು

ಏಜೆನ್ಸೀಸ್
Published 8 ಆಗಸ್ಟ್ 2025, 13:29 IST
Last Updated 8 ಆಗಸ್ಟ್ 2025, 13:29 IST
<div class="paragraphs"><p>ಅತ್ಯಾಚಾರ</p></div>

ಅತ್ಯಾಚಾರ

   

ಸಾಂದರ್ಭಿಕ ಚಿತ್ರ

ಮ್ಯಾಂಚೆಸ್ಟರ್‌: ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಪಾಕಿಸ್ತಾನ ತಂಡದ ಬ್ಯಾಟರ್‌ ಹೈದರ್‌ ಅಲಿ ಇಂಗ್ಲೆಂಡ್‌ನಲ್ಲಿ ಕ್ರಿಮಿನಲ್ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತಿಳಿಸಿದೆ. 

ADVERTISEMENT

ವಿಚಾರಣೆಯ ವರದಿ ಹೊರಬರುವವರೆಗೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಿಸಿಬಿಯು ಅಮಾನತು ಆಡಿದೆ. ಅಲಿ ಅವರಿಗೆ ಅಗತ್ಯವಿರುವ ಕಾನೂನು ಬೆಂಬಲ ಒದಗಿಸಲಾಗಿದೆ ಎಂದೂ ಪಿಸಿಬಿ ತಿಳಿಸಿದೆ. 

ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಒಬ್ಬರನ್ನು ಬಂಧಿಸಲಾಗಿದೆ ಎಂದು ಗ್ರೇಟರ್‌ ಮ್ಯಾಂಚೆಸ್ಟರ್ ಪೊಲೀಸರು ಖಚಿತಪಡಿಸಿದ್ದಾರೆ.

ಪಾಕಿಸ್ತಾನ್‌ ಶಹೀನ್ಸ್‌ ತಂಡದ ಇತ್ತೀಚಿನ ಇಂಗ್ಲೆಂಡ್ ಪ್ರವಾಸದ ವೇಳೆ ‘ಹೈದರ್‌ ಅಲಿ ಒಳಗೊಂಡ ಪ್ರಕರಣಕ್ಕೆ’ ಸಂಬಂಧಪಟ್ಟಂತೆ ಈ ವಿಚಾರಣೆ ನಡೆಯುತ್ತಿದೆ ಎಂದು ಪಿಸಿಬಿ ತಿಳಿಸಿದೆ. 

‘ಅತ್ಯಾಚಾರಕ್ಕೆ ಸಂಬಂಧಿಸಿದ ದೂರು ಪಡೆದಿದ್ದು, 24 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದೇವೆ’ ಎಂದು ಗ್ರೇಟರ್ ಮ್ಯಾಂಚೆಸ್ಟರ್‌ ಪೊಲೀಸರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮ್ಯಾಂಚೆಸ್ಟರ್‌ನ ನಿವಾಸವೊಂದರಲ್ಲಿ ಜುಲೈ 23ರಂದು ಈ ಪ್ರಕರಣ ನಡೆದಿತ್ತೆನ್ನಲಾಗಿದೆ ಎಂದು ಪೊಲಿಸ್‌ ಹೇಳಿಕೆ ತಿಳಿಸಿದೆ. ಹೆಚ್ಚಿನ ವಿಚಾರಣೆ ಬಾಕಿಯಿರಿಸಿ ವ್ಯಕ್ತಿ ಜಾಮೀನಿನಲ್ಲಿದ್ದಾರೆ ಎಂದೂ ತಿಳಿಸಿದೆ. ಬ್ರಿಟನ್‌ ಸಂಪ್ರದಾಯದಂತೆ ಈ ಹಂತದಲ್ಲಿ ಪೊಲೀಸರು ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವುದಿಲ್ಲ.

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಎರಡನೇ ಸ್ಥರದಲ್ಲಿರುವ ಶಹೀನ್ಸ್‌ ತಂಡ ಜುಲೈ 22ರಂದು 15 ದಿನಗಳ ಪ್ರವಾಸ ಆರಂಭಿಸಿತ್ತು.

ಅಲಿ ಎರಡು ಏಕದಿನ ಮತ್ತು 35 ಟಿ20 ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಾರೆ. 2020ರಲ್ಲಿ ಅವರು ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.