ADVERTISEMENT

IPL Auction: ₹ 5.2 ಕೋಟಿಗೆ RCB ಪಾಲಾದ 23 ವರ್ಷದ ಆಲ್‌ರೌಂಡರ್ ಮಂಗೇಶ್ ಯಾದವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2025, 13:55 IST
Last Updated 16 ಡಿಸೆಂಬರ್ 2025, 13:55 IST
   

ಅಬುಧಾಬಿ: ಇಂಡಿಯನ್‌ ಪ್ರೀಮಿಯರ್ ಲೀಗ್‌(ಐಪಿಎಲ್‌) 19ನೇ ಆವೃತ್ತಿಯ ಮಿನಿ ಹರಾಜಿನಲ್ಲಿ ಆಲ್‌ರೌಂಡರ್‌ ಮಂಗೇಶ್ ಯಾದವ್ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡವು ₹ 5.2 ಕೋಟಿಗೆ ಖರೀದಿಸಿದೆ.

₹30 ಲಕ್ಷ ಮೂಲಬೆಲೆ ಹೊಂದಿದ್ದ ಮಂಗೇಶ್ ಯಾದವ್ ಅವರನ್ನು ಖರೀದಿಸಲು ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್‌ ತಂಡಗಳು ಪೈಪೋಟಿ ನಡೆಸಿದವು.

ಮಧ್ಯಪ್ರದೇಶ ಮೂಲದ ಆಲ್‌ರೌಂಡರ್‌ ಮಂಗೇಶ್ ಯಾದವ್ ಅವರು ಮಧ್ಯಪ್ರದೇಶ ಪ್ರೀಮಿಯರ್‌ ಲೀಗ್‌ನಲ್ಲಿ ಗಮನ ಸೆಳೆದಿದ್ದರು.

ADVERTISEMENT

ಎಡಗೈ ಬ್ಯಾಟರ್‌ ಹಾಗೂ ವೇಗದ ಬೌಲರ್‌ ಆಗಿರುವ 23 ವರ್ಷದ ಮಂಗೇಶ್ ಯಾದವ್, 2025ರ ಮಧ್ಯಪ್ರದೇಶ ಪ್ರೀಮಿಯರ್‌ ಲೀಗ್‌ನಲ್ಲಿ 6 ಪಂದ್ಯಗಳಲ್ಲಿ 14 ವಿಕೆಟ್‌ ಪಡೆಯುವ ಮೂಲಕ ಗಮನ ಸೆಳೆದಿದ್ದರು. 3 ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ ಗೊಂಚಲು ಪಡೆದಿದ್ದರು.

ಮಧ್ಯಪ್ರದೇಶ ತಂಡದ ಪರ ಕೇವಲ 2 ಪಂದ್ಯಗಳನ್ನು ಆಡಿರುವ ಎಡಗೈ ವೇಗಿ ಮಂಗೇಶ್ ಯಾದವ್ ಅವರನ್ನು ಆರ್‌ಸಿಬಿ ತಂಡವು ₹5.2 ಕೋಟಿ ಕೊಟ್ಟು ಖರೀದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.