ADVERTISEMENT

IPL Auction 2022: ಆರ್‌ಸಿಬಿಯ ಹೊಸ ತಂಡ ಹೀಗಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2022, 17:00 IST
Last Updated 13 ಫೆಬ್ರುವರಿ 2022, 17:00 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ಆವೃತ್ತಿಗಾಗಿ ಬೆಂಗಳೂರಿನಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಮೂವರನ್ನು ತಂಡದಲ್ಲೇ ಉಳಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸ್ ಇದೀಗ ಹೊಸದಾಗಿ ಒಟ್ಟು 18 ಆಟಗಾರರನ್ನು ಖರೀದಿಸಿದೆ. ಹೀಗಾಗಿ ಆಟಗಾರರ ಸಂಖ್ಯೆಯನ್ನು 21ಕ್ಕೆ ಏರಿಕೆಯಾಗಿದೆ.

2021ರ ಟೂರ್ನಿ ಬಳಿಕತಂಡದ ನಾಯಕತ್ವದಿಂದ ಕೆಳಗಿಳಿದಿರುವ ಮಾಜಿ ನಾಯಕವಿರಾಟ್ ಕೊಹ್ಲಿ (₹ 15 ಕೋಟಿ), ವೇಗಿಮೊಹಮ್ಮದ್ ಸಿರಾಜ್(₹ 7 ಕೋಟಿ) ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ (11 ಕೋಟಿ) ಅವರನ್ನು ತನ್ನಲ್ಲೇ ಉಳಿಸಿಕೊಂಡಿತ್ತು.

ಹೊಸದಾಗಿ ತಂಡ ಸೇರಿಕೊಂಡಿರುವ ಭಾರತದ ಆಟಗಾರರು
1. ಆಕಾಶ್ ದೀಪ್ – ವೇಗದ ಬೌಲರ್ – ₹ 20 ಲಕ್ಷ
2. ಅನೀಶ್ವರ್ ಗೌತಮ್ – ಸ್ಪಿನ್ನರ್ –₹ 20 ಲಕ್ಷ
3. ಲವನೀತ್ ಸಿಸೋಡಿಯಾ – ವಿಕೆಟ್ ಕೀಪರ್-ಬ್ಯಾಟರ್ – ₹ 20 ಲಕ್ಷ
4. ಚಾಮಾ ಮಿಲಿಂದ್ – ವೇಗದ ಬೌಲರ್ – ₹ 25 ಲಕ್ಷ
5. ಸುಯಶ್ ಪ್ರಭುದೇಸಾಯಿ- ವೇಗದ ಬೌಲರ್‌ – ₹ 30 ಲಕ್ಷ
6. ಕರಣ್ ಶರ್ಮಾ –ಸ್ಪಿನ್ನರ್ – ₹ 50 ಲಕ್ಷ
7. ಸಿದ್ಧಾರ್ಥ್ ಕೌಲ್ – ಬೌಲರ್ – ₹ 75 ಲಕ್ಷ
8. ಮಹಿಪಾಲ್ ಲಾಮ್‌ರೋರ್ – ಆಲ್‌ರೌಂಡರ್ – ₹ 95 ಲಕ್ಷ
9. ಶಹಬಾಜ್ ಅಹಮದ್ – ಆಲ್‌ರೌಂಡರ್ – ₹ 2.40 ಕೋಟಿ
10. ಅನೂಜ್ ರಾವತ್ – ವಿಕೆಟ್ ಕೀಪರ್-ಬ್ಯಾಟರ್ – ₹ 3.40 ಕೋಟಿ
11. ದಿನೇಶ್ ಕಾರ್ತಿಕ್ – ವಿಕೆಟ್ ಕೀಪರ್-ಬ್ಯಾಟರ್ – ₹ 5.50 ಕೋಟಿ
12. ಹರ್ಷಲ್ ಪಟೇಲ್ – ವೇಗದ ಬೌಲರ್ – ₹ 10.75 ಕೋಟಿ

ADVERTISEMENT

ಹೊಸದಾಗಿ ತಂಡ ಸೇರಿಕೊಂಡಿರುವವಿದೇಶಿ ಆಟಗಾರರು
13. ಜೇಸನ್ ಬೆಹ್ರೆನ್ಡೋರ್ಫ್‌ (ಆಸ್ಟ್ರೇಲಿಯಾ) –ವೇಗದ ಬೌಲರ್‌ – ₹ 75ಲಕ್ಷ
14. ಫಿನ್ ಅಲೆನ್ (ನ್ಯೂಜಿಲೆಂಡ್) – ವಿಕೆಟ್ ಕೀಪರ್-ಬ್ಯಾಟರ್ – ₹ 80 ಲಕ್ಷ
15. ಶೆರ್ಫಾನ್ ರುದರ್ಫೋರ್ಡ್‌ (ವೆಸ್ಟ್‌ ಇಂಡೀಸ್)– ಆಲ್‌ರೌಂಡರ್–₹ 1 ಕೋಟಿ
16. ಡೇವಿಡ್ ವಿಲ್ಲೇ (ಇಂಗ್ಲೆಂಡ್) –ವೇಗದ ಬೌಲರ್‌ – ₹ 2 ಕೋಟಿ
17. ಫಾಫ್ ಡು ಪ್ಲೆಸಿ (ದಕ್ಷಿಣ ಆಫ್ರಿಕಾ) – ಬ್ಯಾಟರ್ – ₹ 7 ಕೋಟಿ
18. ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ) – ವೇಗದ ಬೌಲರ್ –₹ 7.75 ಕೋಟಿ
19. ವನಿಂದು ಹಸರಂಗ (ಶ್ರೀಲಂಕಾ) – ಸ್ಪಿನ್ನರ್ – ₹ 10.75 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.