ಬೆಂಗಳೂರು: ಐಪಿಎಲ್‌ನಲ್ಲಿ ಮೊದಲ ಎರಡು ಪಂದ್ಯ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸದ್ಯ ಅದೇ ಲಯವನ್ನು ಮುಂದುವರಿಸುವ ತವಕದಲ್ಲಿದೆ. ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡನೇ ಜಯ ಸಾಧಿಸಿದ್ದ ಆರ್‌ಸಿಬಿ, ಇದೀಗ ಸಿಎಸ್‌ಕೆಯನ್ನು ಹಿಂದಿಕ್ಕಿ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ತಂಡವಾಗಿದೆ.
ಇನ್‌ಸ್ಟಾಗ್ರಾಂನಲ್ಲಿ 17.8 ಮಿಲಿಯನ್ ಫಾಲೋವರ್ಸ್‌ಗಳೊಂದಿಗೆ ಸಿಎಸ್‌ಕೆಯನ್ನು ಆರ್‌ಸಿಬಿ ಹಿಂದಿಕ್ಕಿದೆ. ಸಿಎಸ್‌ಕೆಗೆ 17.7 ಮಿಲಿಯನ್ ಫಾಲೋವರ್ಸ್‌ಗಳಿದ್ದಾರೆ.
ನಂತರದ ಸ್ಥಾನದಲ್ಲಿರುವ ತಂಡಗಳ ಪಟ್ಟಿ ಇಂತಿದೆ.
* ಮುಂಬೈ ಇಂಡಿಯನ್ಸ್ - 16.2 ಮಿಲಿಯನ್
* ಕೋಲ್ಕತ್ತ ನೈಟ್ ರೈಡ್ಸ್ - 7 ಮಿಲಿಯನ್
* ಸನ್‌ರೈಸರ್ಸ್ ಹೈದರಾಬಾದ್ - 5.1 ಮಿಲಿಯನ್
* ರಾಜಸ್ಥಾನ ರಾಯಲ್ಸ್ - 4.7 ಮಿಲಿಯನ್
* ಗುಜರಾತ್ ಟೈಟನ್ಸ್ - 4.5 ಮಿಲಿಯನ್
* ಡೆಲ್ಲಿ ಕ್ಯಾಪಿಟಲ್ಸ್ - 4.3 ಮಿಲಿಯನ್
* ಪಂಜಾಬ್ ಕಿಂಗ್ಸ್ - 3.7 ಮಿಲಿಯನ್
* ಲಖನೌ ಸೂಪರ್ ಜೈಂಟ್ಸ್ - 3.5 ಮಿಲಿಯನ್
ಇನ್‌ಸ್ಟಾಗ್ರಾನಲ್ಲಿ ಆರ್‌ಸಿಬಿ ಫಾಲೋವರ್ಸ್ ಹೆಚ್ಚಳದ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
‘ಸಿಎಸ್‌ಕೆ ಎರಡು ಪಂದ್ಯ ಸೋತಿದೆ. ಮುಂಬೈ ಎರಡು ಬಾರಿ ಸೋತಿದೆ. ಆರ್‌ಸಿಬಿ ಎರಡು ಪಂದ್ಯ ಗೆದ್ದಿದ್ದು, ಇನ್‌ಸ್ಟಾಗ್ರಾಂನಲ್ಲಿ ಸಿಎಸ್‌ಕೆಯನ್ನು ಹಿಂದಿಕ್ಕಿದೆ. ಇದು ನಾವು ಈ ಋತುವಿನಲ್ಲಿ ಟ್ರೋಫಿಯನ್ನು ಗೆಲ್ಲುತ್ತೇವೆ ಎಂಬುದರ ಸಂಕೇತವೇ??? ಎಂಬುದಾಗಿ ಆಶಾವಾದಿ ಆರ್‌ಸಿಬಿ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.
ನಾವು ಒಂದು ಟ್ರೋಫಿಯನ್ನು ಗೆದ್ದರೆ ಸ್ವಯಂಚಾಲಿತವಾಗಿ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 20 ಮಿಲಿಯನ್ ತಲುಪುತ್ತದೆ ಎಂದು ಮತ್ತೊಬ್ಬ ಅಭಿಮಾನಿ ಬರೆದುಕೊಂಡಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ ಕುಟುಕಿರುವ ಮುಂಬೈ ಇಂಡಿಯನ್ಸ್ ಅಭಿಮಾನಿ, ಕಳೆದ 18 ವರ್ಷಗಳಲ್ಲಿ ಆರ್‌ಸಿಬಿ ಇದೊಂದೇ ಸಾಧನೆ ಮಾಡಿದೆ ಎಂದಿದ್ದಾರೆ. ಸಿಎಸ್‌ಕೆ ಅಭಿಮಾನಿಯೊಬ್ಬ ‘ಇನ್‌ಸ್ಟಾಗ್ರಾಂ ಅನುಯಾಯಿಗಳು = 17.8 ಮಿಲಿಯನ್, ಟ್ರೋಫಿಗಳು = 0.00’ ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.