ADVERTISEMENT

IPL 2025 | ಓವರ್‌ ರೇಟ್ ನಿಯಮ ಉಲ್ಲಂಘನೆ: ರಿಷಭ್ ಪಂತ್‌ಗೆ ₹30 ಲಕ್ಷ ದಂಡ

ಪಿಟಿಐ
Published 28 ಮೇ 2025, 5:16 IST
Last Updated 28 ಮೇ 2025, 5:16 IST
<div class="paragraphs"><p>ಲಖನೌ ಸೂಪರ್ ಜೈಂಟ್ಸ್</p></div>

ಲಖನೌ ಸೂಪರ್ ಜೈಂಟ್ಸ್

   

– ಪಿಟಿಐ ಚಿತ್ರ

ಲಖನೌ: ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಅವರಿಗೆ ₹ 30 ಲಕ್ಷ ದಂಡ ವಿಧಿಸಲಾಗಿದೆ. 

ADVERTISEMENT

ಮಂಗಳವಾರ ಏಕನಾ ಕ್ರೀಡಾಂಗಣದಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ನಿಗದಿಯ ಅವಧಿಯೊಳಗೆ ಓವರ್‌ಗಳನ್ನು ಮುಗಿಸಿರಲಿಲ್ಲ.  

‘ಲಖನೌ ತಂಡವು ಮೂರನೇ ಸಲ ಸ್ಲೋ ಓವರ್‌ ರೇಟ್ ನಿಯಮ ಉಲ್ಲಂಘಿಸಿದೆ. ನಾಯಕ ಪಂತ್ ಅವರಿಗೆ ₹ 30 ಲಕ್ಷ ಮತ್ತು ತಂಡದ ಇಂಪ್ಯಾಕ್ಟ್‌ ಪ್ಲೇಯರ್ ಸೇರಿದಂತೆ ಉಳಿದೆಲ್ಲ ಆಟಗಾರರಿಗೂ ತಲಾ ₹ 12 ಲಕ್ಷ ಅಥವಾ ಪಂದ್ಯ ಶುಲ್ಕದ ಶೇ50ರಷ್ಟು ದಂಡ ಹಾಕಲಾಗಿದೆ’ ಎಂದು ಐಪಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.