ADVERTISEMENT

ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ನಿಧನ: ಸೆಹ್ವಾಗ್‌, ಪಂತ್ ಸೇರಿ ಗಣ್ಯರಿಂದ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2021, 7:56 IST
Last Updated 7 ನವೆಂಬರ್ 2021, 7:56 IST
ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ಅವರೊಂದಿಗೆ ರಿಷಭ್ ಪಂತ್ (ಟ್ವಿಟರ್ ಚಿತ್ರ)
ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ಅವರೊಂದಿಗೆ ರಿಷಭ್ ಪಂತ್ (ಟ್ವಿಟರ್ ಚಿತ್ರ)   

ನವದೆಹಲಿ: ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ (71) ಅವರ ನಿಧನಕ್ಕೆ ಕ್ರಿಕೆಟ್ ವಲಯದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ತಾರಕ್ ಸಿನ್ಹಾ ಅವರು ಶನಿವಾರ ನಿಧನರಾದರು. ಅವರು ಕ್ರಿಕೆಟ್ ವಲಯದಲ್ಲಿ ‘ಉಸ್ತಾದ್‌ ಜೀ’ ಎಂದೇ ಖ್ಯಾತರಾಗಿದ್ದರು. ನೆಚ್ಚಿನ ಕೋಚ್‌ ಅಗಲಿಕೆಗೆ ಹಿರಿಯ ಕ್ರಿಕೆಟಿಗರು ಕಬಂನಿ ಮಿಡಿದಿದ್ದಾರೆ.

ಟೆಸ್ಟ್ ಆಟಗಾರರಾದ ಸುರೀಂದರ್ ಖನ್ನಾ, ಮನೋಜ್ ಪ್ರಭಾಕರ್, ದಿವಂಗತ ರಮಣ್ ಲಾಂಬಾ, ಅಜಯ್ ಶರ್ಮಾ, ಅತುಲ್ ವಾಸನ್, ಸಂಜೀವ್ ಶರ್ಮಾ, ಆಕಾಶ್ ಚೋಪ್ರಾ, ಕೆ.ಪಿ. ಭಾಸ್ಕರ್, ಶಿಖರ್ ಧವನ್, ಆಶಿಶ್ ನೆಹ್ರಾ ಮತ್ತು ಸದ್ಯ ಭಾರತ ತಂಡದ ವಿಕೆಟ್‌ಕೀಪರ್ ಆಗಿರುವ ರಿಷಭ್ ಪಂತ್, ಮಹಿಳಾ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ, ರುಮೇಲಿ ಧಾರ್ ಅವರು ಸಿನ್ಹಾ ಮಾರ್ಗದರ್ಶನದಲ್ಲಿ ಬೆಳೆದ ಪ್ರಮುಖರಾಗಿದ್ದಾರೆ.

ADVERTISEMENT

‘ತಾರಕ್ ಸಿನ್ಹಾ ಅವರು ನನ್ನ ಮಾರ್ಗದರ್ಶಕ, ಪ್ರೇರಣಾ ಶಕ್ತಿ, ವಿಮರ್ಶಕ ಮತ್ತು ನನ್ನ ಶ್ರೇಷ್ಠ ಅಭಿಮಾನಿಯಾಗಿದ್ದರು. ಅವರು (ತಾರಕ್‌) ನನ್ನನ್ನು ಮನೆ ಮಗನಂತೆ ನೋಡಿಕೊಂಡಿದ್ದರು. ನಾನು ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಅವರು ಯಾವಾಗಲೂ ನನ್ನೊಂದಿಗೆ ಇರುತ್ತಾರೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ತಾರಕ್ ಸರ್’ ಎಂದು ರಿಷಭ್ ಪಂತ್‌ ಟ್ವೀಟ್ ಮಾಡಿದ್ದಾರೆ.

ಉಸ್ತಾದ್‌ ಜೀ (ತಾರಕ್ ಸಿಂಹ) ಅವರ ನಿಧನದಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಅವರ ಮಾರ್ಗದರ್ಶನದ ಹನ್ನೆರಡು ಮಂದಿ ಆಟಗಾರರು ಭಾರತದ ಪರ ಟೆಸ್ಟ್ ಕ್ರಿಕೆಟ್‌ ಆಡಿದ್ದಾರೆ. ಆಟಗಾರರಲ್ಲಿ ಅವರು ಬೆಳೆಸಿದ ಮೌಲ್ಯಗಳು ಭಾರತೀಯ ಕ್ರಿಕೆಟ್‌ಗೆ ಹೆಚ್ಚು ಅನುಕೂಲವಾಗಿದೆ. ಅವರ ಕುಟುಂಬಸ್ಥರು ಮತ್ತು ಶಿಷ್ಯರಿಗೆ ಸಂತಾಪಗಳು ಓಂ ಶಾಂತಿ’ ಎಂದು ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.