ADVERTISEMENT

ಸ್ಪೇನ್‌ನ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಗೆ ರೋಹಿತ್ ಶರ್ಮಾ ಪ್ರಚಾರ ರಾಯಭಾರಿ

ಲೀಗ್‌ನ ರಾಯಭಾರಿಯಾಗಿ ನೇಮಕಗೊಂಡ ವಿಶ್ವದ ಮೊದಲ ಕ್ರಿಕೆಟಿಗ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 12:15 IST
Last Updated 12 ಡಿಸೆಂಬರ್ 2019, 12:15 IST
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಲಾ ಲಿಗಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜೋಸ್‌ ಆ್ಯಂಟೋನಿಯೊ ಮತ್ತು ಕ್ರಿಕೆಟಿಗ ರೋಹಿತ್‌ ಶರ್ಮಾ ಭಾಗವಹಿಸಿದ್ದರು –ಪಿಟಿಐ ಚಿತ್ರ
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಲಾ ಲಿಗಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜೋಸ್‌ ಆ್ಯಂಟೋನಿಯೊ ಮತ್ತು ಕ್ರಿಕೆಟಿಗ ರೋಹಿತ್‌ ಶರ್ಮಾ ಭಾಗವಹಿಸಿದ್ದರು –ಪಿಟಿಐ ಚಿತ್ರ   

ಮುಂಬೈ:ಆರಂಭಿಕ ಬ್ಯಾಟ್ಸ್‌ಮನ್‌ರೋಹಿತ್‌ ಶರ್ಮಾ ಅವರು ಸ್ಪೇನ್‌ನ ಪ್ರತಿಷ್ಠಿತ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯ ಭಾರತದ ಪ್ರಚಾರ ರಾಯಭಾರಿಯಾಗಿ ನೇಮಕವಾಗಿದ್ದಾರೆ.

ಇದರೊಂದಿಗೆ ಲೀಗ್‌ನ ರಾಯಭಾರಿಯಾಗಿ ನೇಮಕಗೊಂಡ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

ಏಕದಿನ ಮಾದರಿಯಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಹೊಂದಿರುವ ಮುಂಬೈನ ರೋಹಿತ್‌, ಈ ಮಾದರಿಯ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ.

ADVERTISEMENT

‘ಲಾ ಲಿಗಾ ಜೊತೆ ಒಪ್ಪಂದ ಮಾಡಿಕೊಂಡಿರುವುದು ಅತೀವ ಖುಷಿ ನೀಡಿದೆ’ ಎಂದು ರೋಹಿತ್‌ ಹೇಳಿದ್ದಾರೆ.

‘ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ, ಶ್ರೇಯಸ್‌ ಅಯ್ಯರ್‌ ಸೇರಿದಂತೆ ಅನೇಕ ಯುವ ಕ್ರಿಕೆಟಿಗರು ಫುಟ್‌ಬಾಲ್‌ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳನ್ನು ವೀಕ್ಷಿಸುವ ಅವರು ಫುಟ್‌ಬಾಲ್‌ ಆಟಗಾರರ ಕೇಶ ವಿನ್ಯಾಸವನ್ನೂ ಅನುಕರಿಸುತ್ತಾರೆ’ ಎಂದಿದ್ದಾರೆ.

‘ನಾನು ಜಿನೆಡಿನ್‌ ಜಿದಾನೆ ಅವರ ಅಭಿಮಾನಿ. ಅವರ ಆಟವನ್ನು ತುಂಬಾ ಇಷ್ಟಪಡುತ್ತೇನೆ. ಸ್ಪೇನ್‌ ತಂಡ ಬಲಿಷ್ಠವಾಗಿದ್ದು ಮುಂಬರುವ ಫಿಫಾ ವಿಶ್ವಕಪ್‌ನಲ್ಲಿ ‍ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.