ನವದೆಹಲಿ: ನಾಯಕ ರೋಹಿತ್ ಶರ್ಮಾ ಕೇವಲ 25–30 ರನ್ ಗಳಿಸುವುದಕ್ಕೇ ಸೀಮಿತಗೊಳ್ಳದೇ ದೊಡ್ಡ ಇನ್ನಿಂಗ್ಸ್ ಆಡುವತ್ತ ಗಮನಹರಿಸಬೇಕು. ಕ್ರೀಸ್‌ನಲ್ಲಿ ಅವರು ಹೆಚ್ಪು ಸಮಯ ಕಳೆದರೆ ಪಂದ್ಯದ ಗತಿ ಬದಲಾಗುತ್ತದೆ ಎಂದು ಮಾಜಿ ಆಟಗಾರ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಏಕದಿನ ಆವೃತ್ತಿಯಲ್ಲಿ ಭಾರತಕ್ಕೆ ಉತ್ತಮ ಆರಂಭ ನೀಡಲು ರೋಹಿತ್ ಆಕ್ರಮಣಕಾರಿಯಾಗಿ ಆಟ ಆಡುತ್ತಾ ನೀಡುತ್ತಾ ಬಂದಿದ್ದಾರೆ. ಆದರೆ ಇದರ ಪರಿಣಾಮ ಬೇಗನೇ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ.
ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗಳಿಸಿದ 41 ರನ್ ಈ ಟೂರ್ನಿಯಲ್ಲಿ ಇದುವರೆಗೆ ಅವರ ಅತಿ ಹೆಚ್ಚಿನ ಮೊತ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.