ರೋಹಿತ್ ಶರ್ಮಾ ಮತ್ತು ಪತ್ನಿ ರಿತಿಕಾ ಸಜದೇ
ಚಿತ್ರಕೃಪೆ: ಇನ್‌ಸ್ಟಾಗ್ರಾಂ
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜದೇ ಅವರು ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಫೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಕ್ರಿಸ್‌ಮಸ್ ಥೀಮ್‌ನ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ರಿತಿಕಾ, ಅದರಲ್ಲಿನ ಗೊಂಬೆಗಳ ಮೇಲೆ ತಮ್ಮ ಕುಟುಂಬದ ನಾಲ್ಕು ಜನರ ಹೆಸರುಗಳನ್ನು ಬರೆದುಕೊಂಡಿದ್ದಾರೆ. ಅದರಲ್ಲಿ ರೋಹಿತ್ ಹೆಸರನ್ನು ‘ರೋ’ ಎಂದು, ರಿತಿಕಾ ಹೆಸರನ್ನು ‘ರೀಟ್ಸ್’, ಮಗಳು ಸಮೈರಾ ಹೆಸರನ್ನು ‘ಸ್ಯಾಮಿ’ ಮತ್ತು ಮಗನ ಹೆಸರನ್ನು ಅಹಾನ್ ಎಂದು ಬರೆದಿದ್ದಾರೆ.
ಆ ಮೂಲಕ ತಮ್ಮ ಮಗನಿಗೆ ‘ಅಹಾನ್ ಶರ್ಮಾ’ ಎಂದು ನಾಮಕರಣ ಮಾಡಿರುವುದಾಗಿ ಬಹಿರಂಗಪಡಿಸಿದ್ದಾರೆ.
ನವೆಂಬರ್ 15ರಂದು ರೋಹಿತ್– ರೀತಿಕಾ ದಂಪತಿಗೆ ಎರಡನೇ ಮಗುವಾಗಿತ್ತು. ಇದೇ ವೇಳೆ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ನಿಗದಿಯಾಗಿದ್ದು, ಈ ಪಂದ್ಯಕ್ಕೆ ರೋಹಿತ್ ಗೈರಾಗಿದ್ದರು. ರೋಹಿತ್ ಅನುಪಸ್ಥಿತಿಯಲ್ಲಿ ಉಪನಾಯಕ ಜಸ್‌ಪ್ರೀತ್ ಬೂಮ್ರಾ ತಂಡದ ನಾಯಕತ್ವ ವಹಿಸಿದ್ದರು.
ಡಿಸೆಂಬರ್ 6ರಂದು ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಆಡಲು ನವೆಂಬರ್ 24ರಂದು ರೋಹಿತ್ ಆಸ್ಟೇಲಿಯಾಕ್ಕೆ ತೆರಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.