ADVERTISEMENT

ವಿರಾಟ್ ಬ್ಯಾಟಿಂಗ್ ನೆನಪಿಸಿದ ಸ್ಯಾಮ್ಸನ್; ಚೇಸಿಂಗ್‌ನಲ್ಲಿ ಕೊಹ್ಲಿ ದಾಖಲೆ ಬ್ರೇಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2026, 5:33 IST
Last Updated 2 ಮಾರ್ಚ್ 2026, 5:33 IST
<div class="paragraphs"><p>ಸಂಜು ಸ್ಯಾಮ್ಸನ್–ವಿರಾಟ್ ಕೊಹ್ಲಿ</p></div>

ಸಂಜು ಸ್ಯಾಮ್ಸನ್–ವಿರಾಟ್ ಕೊಹ್ಲಿ

   

ಕೋಲ್ಕತ್ತ: ಸಂಜು ಸ್ಯಾಮ್ಸನ್ ಅವರ ದಿಟ್ಟ ಬ್ಯಾಟಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಇಲ್ಲಿನ ಈಡೆನ್ ಗಾರ್ಡನ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್‌ನ ಸೂಪರ್–8ರ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.

ವಿರಾಟ್ ಕೊಹ್ಲಿ ಆಟ ನೆನೆಪಿಸಿದ ಸಂಜು

ADVERTISEMENT

ನಿನ್ನೆ (ಭಾನುವಾರ) ಮುಕ್ತಾಯಗೊಂಡ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ವೈಖರಿಯು ಭಾರತ ತಂಡದ ತಾರಾ ಆಟಗಾರ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅನ್ನು ನೆನಪಿಸಿದೆ.

ವಿಂಡೀಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಸಂಜು, ಸರಾಗವಾಗಿ ರನ್ ಗಳಿಸಿದರು. ಬೌಂಡರಿ, ಸಿಕ್ಸರ್‌ಗಳ ಜೊತೆ ಡಾಟ್ ಬಾಲ್‌ಗಳ ಸಂಖ್ಯೆಯನ್ನು ತಪ್ಪಿಸಿದ ಅವರು, ಒಂದು, ಎರಡು ರನ್‌ಗಳನ್ನು ಸುಲಭವಾಗಿ ಕದಿಯುವ ಮೂಲಕ ರನ್‌ ವೇಗ ಕುಸಿಯದಂತೆ ನೋಡಿಕೊಂಡರು. ಅಷ್ಟೇ ಅಲ್ಲ, ಈ ಅದ್ಬುತ ಪ್ರದರ್ಶನದ ನೆರವಿನಿಂದ ವಿರಾಟ್ ಕೊಹ್ಲಿ ಅವರ ದಾಖಲೆ ಒಂದನ್ನು ಮೀರಿದ್ದಾರೆ.

ವಿಂಡೀಸ್ ವಿರುದ್ಧ ಅಜೇಯ 97 ರನ್ ಗಳಿಸಿದ ಸಂಜು ಸ್ಯಾಮ್ಸನ್, ಟಿ20 ವಿಶ್ವಕಪ್‌ನಲ್ಲಿ ಚೇಸಿಂಗ್ ವೇಳೆ ಭಾರತ ಪರ ಒಂದೇ ಪಂದ್ಯದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಇದಕ್ಕೂ ಮೊದಲು 2016ರ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮತ್ತು 2022ರ ಆವೃತ್ತಿಯಲ್ಲಿ ಮೆಲ್ಬರ್ನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 82 ರನ್‌ಗಳಿಸಿದ್ದ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು.

ಟಿ20ಯಲ್ಲಿ ಅತ್ಯಧಿಕ ಅರ್ಧಶತಕ

ಭಾರತ ತಂಡದ ಪರ ಅತ್ಯಧಿಕ 6ನೇ ಅರ್ಧಶತಕ ಸಿಡಿಸುವ ಮೂಲಕ, ಭಾರತದ ಪರ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ವಿಕೆಟ್ ಕೀಪರ್-ಬ್ಯಾಟರ್ ಎಂಬ ದಾಖಲೆಯನ್ನು ಸಂಜು ಸ್ಯಾಮ್ಸನ್ ತಮ್ಮದಾಗಿಸಿಕೊಂಡರು. 5 ಅರ್ಧಶತಕ ಸಿಡಿಸಿರುವ ಇಶಾನ್ ಕಿಶನ್ ನಂತರದ ಸ್ಥಾನದಲ್ಲಿದ್ದಾರೆ. ಕೆ.ಎಲ್. ರಾಹುಲ್ ಅವರು ಟಿ20ಯಲ್ಲಿ ಒಟ್ಟಾರೆ 22 ಅರ್ಧಶತಕ ದಾಖಲಿಸಿದ್ದರೂ, ವಿಕೆಟ್ ಕೀಪರ್ ಆಗಿ ಅವರು 3 ಅರ್ಧಶತಕ ಬಾರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.