ADVERTISEMENT

ಶಾಹೀನ್‌ ಐಸಿಸಿ ವರ್ಷದ ಕ್ರಿಕೆಟಿಗ: ಇದೇ ಮೊದಲ ಬಾರಿಗೆ ಪಾಕ್‌ ಆಟಗಾರನಿಗೆ ಗೌರವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2022, 14:50 IST
Last Updated 24 ಜನವರಿ 2022, 14:50 IST
 ಶಾಹೀನ್ ಶಾ ಆಫ್ರಿದಿ
ಶಾಹೀನ್ ಶಾ ಆಫ್ರಿದಿ   

ನವದೆಹಲಿ: ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಶಾ ಆಫ್ರಿದಿ ಅವರು ಸರ್‌ ಗ್ಯಾರ್‌ಫೀಲ್ಡ್ ಸೋಬರ್ಸ್‌ ಹೆಸರಿನಲ್ಲಿ ನೀಡುವ ‘ಐಸಿಸಿ ವರ್ಷದ ಪುರುಷ ಕ್ರಿಕೆಟಿಗ‘ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದರೊಂದಿಗೆ ಅವರು ಐಸಿಸಿ ಪುರುಷರ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದ ಮೊದಲ ಪಾಕಿಸ್ತಾನಿ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 21 ವರ್ಷದ ಆಟಗಾರ 2021ರಲ್ಲಿ 36 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 78 ವಿಕೆಟ್ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT