ADVERTISEMENT

ಚೊಚ್ಚಲ ವಿಶ್ವಕಪ್‌ ಕಿರೀಟ: ಗೆಲುವಿನ ಬಳಿಕ ಸ್ಮೃತಿ ಮಂದಾನ ಪ್ರತಿಕ್ರಿಯೆ..

ಪಿಟಿಐ
Published 3 ನವೆಂಬರ್ 2025, 3:19 IST
Last Updated 3 ನವೆಂಬರ್ 2025, 3:19 IST
<div class="paragraphs"><p>ಸ್ಮೃತಿ ಮಂದಾನ</p></div>

ಸ್ಮೃತಿ ಮಂದಾನ

   

(ಪಿಟಿಐ ಚಿತ್ರ)

ನವಿ ಮುಂಬೈ: ಭಾರತ ಮಹಿಳಾ ತಂಡವು ಚೊಚ್ಚಲ ವಿಶ್ವಕಪ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಸಂತಸ ಹಂಚಿಕೊಂಡಿದ್ದಾರೆ.

ADVERTISEMENT

ನಾವು ಗೆಲುವು ಸಾಧಿಸಿದ್ದೇವೆ ಎಂದು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡೆ. ನಾವು ಚಾಂಪಿಯನ್ಸ್‌ ಎಂದಾಗ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ. ಈಗಾಲೂ ಆ ಕ್ಷಣ ನನಗೆ ಸ್ಮರಣೀಯ ಎಂದೂ ಸ್ಮೃತಿ ಮಂದಾನ ಗೆಲುವಿನ ಬಳಿಕ ತಮಗಾದ ಅನುಭವವನ್ನು ವ್ಯಕ್ತಪಡಿಸಿದ್ದಾರೆ.

2020ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೋತಾಗ ನಾನು ಭಾರತ ಮಹಿಳಾ ತಂಡದ ಭಾಗವಾಗಿದ್ದೆ. ಈ ಸಮಯದಲ್ಲಿ ನಮ್ಮ ತಂಡದ ಎಲ್ಲರಿಗೂ ಆಘಾತವಾಗಿತ್ತು. ನಾವು ಅನೇಕ ವಿಶ್ವಕಪ್‌ಗಳಲ್ಲಿ ಸೋತಾಗ ಅಂಥಹದ್ದೇ ಆಘಾತಗಳನ್ನು ಅನುಭವಿಸಿದ್ದೇವೆ. ಆದರೆ ಆ ಆಘಾತಗಳೇ ಇಂದಿಗೆ ಪ್ರೇರಣೆಯಾಗಿದೆ ಎಂದೂ ಮಂದಾನ ಹೇಳಿದ್ದಾರೆ.

ಮಹಿಳಾ ಕ್ರಿಕೆಟ್‌ನಲ್ಲಿ ಆಡುವುದು ನಮಗೆ ದೊಡ್ಡ ಜವಾಬ್ದಾರಿ ಇದ್ದಂತೆ. ಇದನ್ನು ನಾನು ನಂಬುತ್ತೇನೆ. ಕಳೆದ ಒಂದೂವರೆ ತಿಂಗಳಿನಿಂದ ಜನರಿಂದ ನಮಗೆ ದೊರೆತ ಬೆಂಬಲವನ್ನು ನೋಡಲು ಖುಷಿಯಾಗುತ್ತದೆ ಎಂದು ಮಂದಾನ ಹೇಳಿದ್ದಾರೆ

2020ರ ವಿಶ್ವಕಪ್‌ ನಿರಾಶೆಯ ನಂತರದ ತಂಡವು ಫಿಟ್‌ನೆಸ್, ಕೌಶಲ್ಯ ಮತ್ತು ಏಕತೆಯ ಮೇಲೆ ಗಮನಹರಿಸಿತ್ತು. ಇದರಿಂದ ತಮ್ಮ ತಂಡದಲ್ಲಿ ಅನೇಕ ಬದಲಾವಣೆಗಳು ತಂದಿದೆ. ಹೀಗಾಗಿಯೇ ಇಂದು ಭಾರತ ಮಹಿಳಾ ಕ್ರಿಕೆಟ್‌ ತಂಡ ಗೆಲುವು ಸಾಧಿಸಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.