
ತೆಂಬ ಬವುಮಾ
(jಪಿಟಿಐ ಚಿತ್ರ)
ಜೋಹಾನ್ಸ್‌ಬರ್ಗ್: ಆತಿಥೇಯ ಭಾರತ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ20 ಅಂತರರಾಷ್ಟ್ರೀಯ ಸರಣಿಗಳಿಗೆ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ.
ದಕ್ಷಿಣ ಆಫ್ರಿಕಾ ಏಕದಿನ ತಂಡವನ್ನು ತೆಂಬ ಬವುಮಾ ಮತ್ತು ಟಿ20 ತಂಡವನ್ನು ಏಡೆನ್ ಮಾರ್ಕರಂ ಮುನ್ನಡೆಸಲಿದ್ದಾರೆ.
ಟಿ20 ತಂಡಕ್ಕೆ ಅನುಭವಿ ವೇಗದ ಬೌಲರ್ ಎನ್ರಿಚ್ ನಾಕಿಯಾ ಪುನರಾಗಮನ ಮಾಡಿಕೊಂಡಿದ್ದಾರೆ. ಗಾಯಾಳು ಕಗಿಸೊ ರಬಾಡ ತವರಿಗೆ ಹಿಂತಿರುಗಲಿದ್ದು, ಸರಣಿಗೆ ಅಲಭ್ಯರಾಗಿದ್ದಾರೆ.
ಏಕದಿನ ಕ್ರಿಕೆಟ್‌ಗೆ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿರುವ ಕ್ವಿಂಟನ್ ಡಿ ಕಾಕ್ ತಂಡಕ್ಕೆ ಮರಳಿದ್ದಾರೆ. ಕೇಶವ್ ಮಹಾರಾಜ್ ಸಹ ಸ್ಥಾನ ಪಡೆದಿದ್ದಾರೆ.
ಟೆಸ್ಟ್ ಸರಣಿಯ ಬಳಿಕ ಮೂರು ಪಂದ್ಯಗಳ ಏಕದಿನ ಮತ್ತು ಐದು ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಭಾಗವಹಿಸಲಿದೆ.
ದಕ್ಷಿಣ ಆಫ್ರಿಕಾ ಏಕದಿನ ತಂಡ ಇಂತಿದೆ:
ತೆಂಬ ಬವುಮಾ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರೀಟ್ಜ್‌ಕೆ, ಡೆವಾಲ್ಡ್ ಬ್ರೆವಿಸ್, ನಾಂಡ್ರೆ ಬರ್ಗರ್, ಕ್ವಿಂಟನ್ ಡಿ ಕಾಕ್, ಟೋನಿ ಡಿ ಜೊರ್ಜಿ, ರುಬಿನ್ ಹರ್ಮನ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಏಡೆನ್ ಮಾರ್ಕರಂ, ಲುಂಗಿ ಗಿಡಿ, ರಯಾನ್ ರಿಕೆಲ್ಟನ್, ಪ್ರೆನೆಲನ್ ಸುಬ್ರಯೆನ್
ದಕ್ಷಿಣ ಆಫ್ರಿಕಾ ಟಿ20 ತಂಡ ಇಂತಿದೆ:
ಏಡೆನ್ ಮಾರ್ಕರಂ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿ ಕಾಕ್, ಟೋನಿ ಡಿ ಜೊರ್ಜಿ, ಡೊನ್ನಾವನ್ ಫೆರೆರಾ, ರೀಜಾ ಹೆನ್ರಿಕ್ಸ್, ಮಾರ್ಕನ್ ಜಾನ್ಸೆನ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಕ್ವೇನಾ ಮಾಫಾಕಾ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಎನ್ರಿಚ್ ನಾಕಿಯಾ, ಟ್ರಿಸ್ಟನ್ ಸ್ಟಬ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.