ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ನವದೆಹಲಿ: ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ವಿಶ್ವ ಬೌಲಿಂಗ್ ಲೀಗ್‌ನಲ್ಲಿ (ಡಬ್ಲ್ಯುಬಿಎಲ್) ಹೂಡಿಕೆಗೆ ಮುಂದಾಗಿದ್ದಾರೆ. ಇದರಿಂದಾಗಿ, ಡಬ್ಲ್ಯುಬಿಎಲ್‌ಗೆ ಭಾರಿ ಉತ್ತೇಜನ ದೊರೆತಂತಾಗಿದೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ವಿರಾಟ್ ಕೊಹ್ಲಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫುಟ್‌ಬಾಲ್ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಿಯೋನೆಲ್ ಮೆಸ್ಸಿ ಅವರ ನಂತರ ಅತಿ ಹೆಚ್ಚು ಮಂದಿ ಹಿಂಬಾಲಿಸುತ್ತಿರುವ ಅಥ್ಲೀಟ್ ಎಂಬ ಖ್ಯಾತಿ ಕೊಹ್ಲಿಯದ್ದು.
ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿರುವ ಕೊಹ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ಡಬ್ಲ್ಯುಬಿಎಲ್ ಸಂಘಟಕರು, 'ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಅವರನ್ನು ಪ್ರಮುಖ ಹೂಡಿಕೆದಾರ ಎಂಬುದಾಗಿ ಘೋಷಿಸಲು ವಿಶ್ವ ಬೌಲಿಂಗ್ ಲೀಗ್ ಹರ್ಷಿಸುತ್ತದೆ. ಬೌಲಿಂಗ್ ಕ್ರೀಡೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಇದು ಹೊಸ ದಿಟ್ಟ ಅಧ್ಯಾಯವಾಗಿದೆ' ಎಂದು ತಿಳಿಸಿದ್ದಾರೆ.
ಬೇಸ್‌ಬಾಲ್ ಆಟಗಾರ, 'ಲಾಸ್ ಏಂಜಲೀಸ್ ಡಾಡ್ಜರ್ಸ್' ತಂಡದ ಮೂಕೀ ಬೆಟ್ಸ್ ಅವರು ಡಬ್ಲ್ಯುಬಿಎಲ್‌ನಲ್ಲಿ ಮೊದಲ ತಂಡ ಖರೀದಿಸಿದ್ದಾರೆ.
ಮಿಶ್ರ (ಪುರುಷ ಹಾಗೂ ಮಹಿಳಾ ಆಟಗಾರರು) ತಂಡಗಳು ಕಣಕ್ಕಿಳಿಯಲಿರುವ ಈ ಲೀಗ್‌ನ ಫ್ರಾಂಚೈಸ್‌ಗಳು ಮತ್ತು ವೇಳಾಪಟ್ಟಿಯನ್ನು ಡಬ್ಲ್ಯುಬಿಎಲ್ ಇನ್ನಷ್ಟೇ ಘೋಷಿಸಬೇಕಿದೆ.
ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್ ಅವರ ಬ್ಯಾಟಿಂಗ್ ಅನ್ನು ಏಕದಿನ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಮಾತ್ರ ಕಣ್ತುಂಬಿಕೊಳ್ಳಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.