ADVERTISEMENT

IPL 2023 PBKS vs SRH: ಶಿಖರ್‌ ಧವನ್‌ 99: ಹೈದರಾಬಾದ್‌ 143/9

ಪಿಟಿಐ
Published 9 ಏಪ್ರಿಲ್ 2023, 16:31 IST
Last Updated 9 ಏಪ್ರಿಲ್ 2023, 16:31 IST
   

ಹೈದರಾಬಾದ್: ಅಕ್ಷರಶಃ ಏಕಾಂಗಿ ಹೋರಾಟ ನಡೆಸಿದ ಶಿಖರ್ ಧವನ್ ಕೇವಲ ಒಂದು ರನ್‌ ಅಂತರದಿಂದ ಶತಕ ಕೈತಪ್ಪಿಸಿಕೊಂಡರು. ಆದರೆ, ಪಂಜಾಬ್ ಕಿಂಗ್ಸ್ ತಂಡವು ಗೌರವಯುತ ಮೊತ್ತ ಗಳಿಸಲು ಕಾರಣರಾದರು.

ಭಾನುವಾರ ಇಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ 66 ಎಸೆತಗಳಲ್ಲಿ ಅಜೇಯ 99 ರನ್ ಗಳಿಸಿದ ಶಿಖರ್ ಆಟದ ಬಲದಿಂದ ಪಂಜಾಬ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 143 ರನ್ ಗಳಿಸಿತು.

ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ADVERTISEMENT

ಸನ್‌ರೈಸರ್ಸ್ ತಂಡದ ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಇನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಪ್ರಭಸಿಮ್ರನ್ ಸಿಂಗ್ ವಿಕೆಟ್ ಕಬಳಿಸಿದರು. ಎರಡನೇ ಓವರ್‌ನಲ್ಲಿ ಮಾರ್ಕೊ ಜೆನ್ಸನ್ ಎಸೆತದಲ್ಲಿ ಮ್ಯಾಥ್ಯೂ ಶಾಟ್ ಔಟಾದರು.

ಒಂದು ಕಡೆ ವಿಕೆಟ್‌ಗಳು ಉರುಳುತ್ತಿದ್ದರೂ ಶಿಖರ್ ಧವನ್ ಬ್ಯಾಟ್ ಬೀಸುತ್ತಿದ್ದರು. ಎಲ್ಲ ಬೌಲರ್‌ಗಳನ್ನೂ ದಿಟ್ಟವಾಗಿ ಎದುರಿಸಿದರು. ಆರಂಭಿಕ ಬ್ಯಾಟರ್‌ ಆಗಿ ಕಣಕ್ಕಿಳಿದವರು ಕೊನೆಯ ಎಸೆತದವರೆಗೂ ಕ್ರಿಸ್‌ನಲ್ಲಿದ್ದು ದಾಖಲೆ ಬರೆದರು.

ಶಿಖರ್ ಅವರನ್ನು ಬಿಟ್ಟರೆ ಸ್ಯಾಮ್ ಕರನ್ (22 ರನ್) ಅವರೊಬ್ಬರೇ ಎರಡಂಕಿ ಗಳಿಸಿದರು. ಸನ್‌ರೈಸರ್ಸ್ ತಂಡದ ಮಯಂಕ್ ಮಾರ್ಕಂಡೆ ನಾಲ್ಕು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಪಂಜಾಬ್ ಕಿಂಗ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 143 (ಶಿಖರ್ ಧವನ್ ಔಟಾಗದೆ 99, ಸ್ಯಾಮ್ ಕರನ್ 22, ಮಯಂಕ್ ಮಾರ್ಕಂಡೆ 15ಕ್ಕೆ4, ಮಾರ್ಕೊ ಜೆನ್ಸೆನ್ 16ಕ್ಕೆ2, ಉಮ್ರಾನ್ ಮಲಿಕ್ 32ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.