
ಟಿ20 ವಿಶ್ವಕಪ್ ಟ್ರೋಫಿ
ಚಿತ್ರ: ಐಸಿಸಿ
2026ರ ಟಿ20 ವಿಶ್ವಕಪ್‌ನ ಸೂಪರ್ 8ಕ್ಕೆ ತಂಡಗಳು ಅಂತಿಮಗೊಂಡಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಂದಿನ ಆವೃತ್ತಿಯ ಟಿ20 ವಿಶ್ವಕಪ್‌ಗೆ ನೇರ ಅರ್ಹತೆ ಪಡೆದ ತಂಡಗಳನ್ನು ದೃಢಪಡಿಸಿದೆ.
ಮುಂಬರುವ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ಆಯೋಜನೆಯಾಗುತ್ತಿರುವುದರಿಂದ ಈ ಎರಡು ತಂಡಗಳು ನೇರವಾಗಿ ಅರ್ಹತೆ ಪಡೆದುಕೊಂಡಿವೆ. ಇದರ ಜೊತೆಗೆ ಈ ಬಾರಿಯ ವಿಶ್ವಕಪ್‌ನಲ್ಲಿ ಸೂಪರ್ 8ರ ಹಂತಕ್ಕೆ ಪ್ರವೇಶ ಪಡೆದಿರುವ ಭಾರತ, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸಹ ಮುಂಬರುವ ಆವೃತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿವೆ.
ಇದರ ಜೊತೆಗೆ ಬಾಂಗ್ಲಾದೇಶ, ಅಫ್ಗಾನಿಸ್ತಾನ ಮತ್ತು ಐರ್ಲೆಂಡ್ ತಂಡಗಳು ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಆದರೆ, ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯಕ್ಕೆ ಒಂದು ದಿನದ ಮೊದಲು ಈ ತಂಡಗಳನ್ನು ಅಧಿಕೃತವಾಗಿ ಐಸಿಸಿ ಘೋಷಣೆ ಮಾಡಲಿದೆ.
ಈ 12 ತಂಡಗಳನ್ನು ಹೊರತುಪಡಿಸಿ, ಉಳಿದ 8 ತಂಡಗಳು ಮುಂದಿನ ಎರಡು ವರ್ಷಗಳಲ್ಲಿ ನಡೆಯುವ ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ.
‘ಈ 9 ತಂಡಗಳನ್ನು ಹೊರತುಪಡಿಸಿ, ಐಸಿಸಿ ಪುರುಷರ ಟಿ20ಐ ತಂಡದ ಶ್ರೇಯಾಂಕದ ಆಧಾರದ ಮೇಲೆ ಉಳಿದ ಮೂರು ಅತ್ಯುನ್ನತ ಶ್ರೇಯಾಂಕಿತ ತಂಡಗಳನ್ನು ಮಾರ್ಚ್ 9ರಂದು ಘೋಷಣೆ ಮಾಡಲಾಗುವುದು. ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯಕ್ಕೆ ಮುನ್ನ ಯಾವುದೇ ಟಿ20ಐ ದ್ವಿಪಕ್ಷೀಯ ಸರಣಿ ಇಲ್ಲವಾಗಿರುವುದರಿಂದ, ಅಗ್ರಸ್ಥಾನದಲ್ಲಿರುವ ಬಾಂಗ್ಲಾದೇಶ, ಅಫ್ಗಾನಿಸ್ತಾನ ಮತ್ತು ಐರ್ಲೆಂಡ್ ತಂಡಗಳು ನೇರ ಅರ್ಹತೆ ಪಡೆದುಕೊಳ್ಳಲಿವೆ’ ಎಂದು ಐಸಿಸಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.