ADVERTISEMENT

ಅಭಿಷೇಕ್, ತಿಲಕ್ ಸೇರಿ ಮೊದಲ ಬಾರಿ ಟಿ20 ವಿಶ್ವಕಪ್ ಆಡಲು ಆಯ್ಕೆಯಾದವರು ಇವರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2025, 12:19 IST
Last Updated 22 ಡಿಸೆಂಬರ್ 2025, 12:19 IST
ಅಭಿಷೇಕ್ ಶರ್ಮಾ
ಅಭಿಷೇಕ್ ಶರ್ಮಾ   

2026ರ ಫೆಬ್ರುವರಿ 7ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿ ಎಂಬಂತೆ, ಉಪನಾಯಕನಾಗಿದ್ದ ಶುಭಮನ್‌ ಗಿಲ್ ಹಾಗೂ ವಿಕೆಟ್ ಕೀಪರ್ ಜಿತೇಶ್ ಶರ್ಮಾರನ್ನು ತಂಡದಿಂದ ಕೈಬಿಡಲಾಗಿದೆ. ಹಾಗೂ ಐವರು ಆಟಗಾರರಿಗೆ ಇದು ಮೊದಲ ಟಿ20 ವಿಶ್ವಕಪ್ ಟೂರ್ನಿಯಾಗಿದೆ.

ಶನಿವಾರ ಬಿಡುಗಡೆ ಮಾಡಿರುವ ತಂಡದಲ್ಲಿ ಇಶಾನ್ ಕಿಶನ್ ಅವರನ್ನು ಹೊರತುಪಡಿಸಿ, ಉಳಿದ ಬಹುತೇಕ ಆಟಗಾರರು ಕಳೆದೊಂದು ವರ್ಷದಿಂದ ಭಾರತ ತಂಡದ ಪರ ಉತ್ತಮ ಪ್ರದರ್ಶನ ತೋರಿರುವವರೇ ಆಗಿದ್ದಾರೆ. ಅದಾಗ್ಯೂ ಕೆಲವು ಆಟಗಾರರಿಗೆ ಇದು ಮೊದಲ ವಿಶ್ವಕಪ್ ಆಗಿದ್ದರೆ, ಇನ್ನೂ ಕೆಲವರು ಈ ಹಿಂದೆ ಆಡಿರುವ ಅನುಭವ ಹೊಂದಿದ್ದಾರೆ.

ಐವರು ಆಟಗಾರರಿಗೆ ಚೊಚ್ಚಲ ವಿಶ್ವಕಪ್

ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ರಿಂಕು ಸಿಂಗ್, ವಾಷಿಂಗ್‌ಟನ್ ಸುಂದರ್ ಮತ್ತು ಹರ್ಷಿತ್ ರಾಣಾ ಅವರಿಗೆ ಇದು ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಾಗಿದೆ. ವರುಣ್ ಚಕ್ರವರ್ತಿ 2023ರ ವಿಶ್ವಕಪ್‌ನಲ್ಲಿ ತಂಡದಲ್ಲಿ ಇರಲಿಲ್ಲ. ಆದರೆ, ಅವರು 2021ರ ತಂಡದಲ್ಲಿ ಇದ್ದರು. ಇಶಾನ್ ಕಿಶನ್ 2023ರಲ್ಲಿ ಚಾಂಪಿಯನ್ ತಂಡದ ಭಾಗವಾಗಿದ್ದರು.

ADVERTISEMENT

ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪನಾಯಕ), ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ವಾಷಿಂಗ್ಟನ್‌ ಸುಂದರ್, ವರುಣ ಚಕ್ರವರ್ತಿ, ಇಶಾನ್ ಕಿಶನ್ (ವಿಕೆಟ್‌ಕೀಪರ್), ರಿಂಕು ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.