ADVERTISEMENT

T20 World Cup ಸೆಮಿಫೈನಲ್ಸ್: ನ್ಯೂಜಿಲೆಂಡ್, ಇಂಗ್ಲೆಂಡ್‌ಗೆ ಎದುರಾಳಿ ಯಾರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2022, 12:38 IST
Last Updated 5 ನವೆಂಬರ್ 2022, 12:38 IST
ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ ಮತ್ತು ಇಂಗ್ಲೆಂಡ್‌ ತಂಡದ ನಾಯಕ ಜಾಸ್‌ ಬಟ್ಲರ್‌
ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ ಮತ್ತು ಇಂಗ್ಲೆಂಡ್‌ ತಂಡದ ನಾಯಕ ಜಾಸ್‌ ಬಟ್ಲರ್‌   

ಸಿಡ್ನಿ: ಈ ಬಾರಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ 'ಎ' ಗುಂಪಿನಿಂದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ ತಂಡಗಳು ಸೆಮಿಫೈನಲ್‌ ತಲುಪಿವೆ.ಆದರೆ, 'ಬಿ' ಗುಂಪಿನಿಂದ ಯಾವುದೇ ತಂಡ ಈವರೆಗೆ ನಾಕೌಟ್‌ ಟಿಕೆಟ್‌ ಗಿಟ್ಟಿಸಿಕೊಂಡಿಲ್ಲ.

ಇಂದು ಸಿಡ್ನಿಯಲ್ಲಿ ನಡೆದ 'ಸೂಪರ್‌ 12' ಹಂತದ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಸೋಲುಣಿಸುವ ಮೂಲಕ ಇಂಗ್ಲೆಂಡ್‌ ಪಡೆ 'ಎ' ಗುಂಪಿನಿಂದ ಎರಡನೇ ತಂಡವಾಗಿ ನಾಲ್ಕರ ಘಟಕ್ಕೆ ಮುನ್ನಡೆದಿದೆ. ಇದರಿಂದಾಗಿ ಇತ್ತಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಕನಸು ಕಾಣುತ್ತಿದ್ದ ಆಸ್ಟ್ರೇಲಿಯಾ ಮತ್ತು 2022ರ ಏಷ್ಯಾಕಪ್‌ ಚಾಂಪಿಯನ್‌ ಆಗಿರುವ ಶ್ರೀಲಂಕಾ ಟೂರ್ನಿಯಿಂದ ಹೊರ ಬಿದ್ದಿವೆ.

'ಸೂಪರ್‌ 12' ಹಂತದಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯ ಮತ್ತು ಒಂದು ಸೋಲು ಕಂಡಿರುವ ಭಾರತ 'ಬಿ' ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ.ದಕ್ಷಿಣ ಆಫ್ರಿಕಾ ನಾಲ್ಕು ಪಂದ್ಯಗಳಲ್ಲಿ ಎರಡು ಜಯ ಮತ್ತು ಒಂದು ಸೋಲು ಕಂಡಿದೆ. ಮಳೆಯಿಂದಾಗಿ ರದ್ದಾದಜಿಂಬಾಬ್ವೆ ವಿರುದ್ಧದ ಒಂದು ಪಂದ್ಯದಲ್ಲಿ ಪಾಯಿಂಟ್‌ ಹಂಚಿಕೆ ಮಾಡಿಕೊಂಡಿದೆ. ಹೀಗಾಗಿ ಒಟ್ಟು 5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ADVERTISEMENT

ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡೆರಡು ಸೋಲು, ಗೆಲುವು ಕಂಡಿದ್ದು, ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ದಕ್ಷಿಣ ಆಫ್ರಿಕಾತನ್ನ ಮುಂದಿನ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಆಡಲಿದೆ. ಇಲ್ಲಿ ಜಯ ಗಳಿಸಿದರೆ ನೇರವಾಗಿ ಸೆಮಿಗೆ ಪ್ರವೇಶ ಪಡೆಯಲಿದೆ. ಹೀಗಾದರೆ, ಭಾರತ ತಂಡ ಜಿಂಬಾಬ್ವೆ ವಿರುದ್ಧ ಗೆಲ್ಲಲೇಬೇಕಾದ ಸ್ಥಿತಿಗೆ ತಲುಪುತ್ತದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ಪಡೆ ನೆದರ್‌ಲೆಂಡ್ಸ್‌ಗೆ ಮಣಿದರೆ, ಪಾಕಿಸ್ತಾನ vs ಬಾಂಗ್ಲಾದೇಶ ಪಂದ್ಯದಲ್ಲಿ ಗೆಲ್ಲುವ ತಂಡ ಮುಂದಿನ ಹಂತಕ್ಕೇರಲಿದೆ.

ಈ ಮೂರೂ ಪಂದ್ಯಗಳುನಾಳೆ (ನವೆಂಬರ್‌ 6ರಂದು) ನಡೆಯಲಿವೆ.

ಅಂತಿಮವಾಗಿ 'ಎ' ಗುಂಪಿನ ಮೊದಲಸ್ಥಾನಿಗೆ'ಬಿ' ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿ ಉಳಿಯುವ ತಂಡಸವಾಲೊಡ್ಡಲಿದೆ. 'ಬಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಕ್ಕೆ'ಎ' ಗುಂಪಿನ ಎರಡನೇ ತಂಡ ಪೈಪೋಟಿ ನೀಡಲಿದೆ. ಸೆಮಿಫೈನಲ್‌ ಪಂದ್ಯಗಳು ನವೆಂಬರ್‌ 9 ಮತ್ತು 10 ರಂದು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.