
ಆ್ಯನ್ರಿಚ್ ನಾಕಿಯಾ
ಪಿಟಿಐ ಚಿತ್ರ
ಜೊಹಾನೆಸ್‌ಬರ್ಗ್: ಗಾಯದ ಸಮಸ್ಯೆ ಆಗಾಗ ಒಳಗಾಗುವ ವೇಗದ ಬೌಲರ್ ಆ್ಯನ್ರಿಚ್ ನಾಕಿಯಾ ಅವರನ್ನು ಮುಂದಿನ ತಿಂಗಳ 7ರಿಂದ ಭಾರತ– ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡುವ ದಕ್ಷಿಣ ಆಫ್ರಿಕಾ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.
32 ವರ್ಷದ ನಾಕಿಯಾ ಅವರು ಭಾರತ ವಿರುದ್ಧ ಡಿಸೆಂಬರ್‌ನಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಿದ್ದರು. 2024ರ ವಿಶ್ವಕಪ್‌ನಲ್ಲಿ ಅವರು 15 ವಿಕೆಟ್‌ಗಳನ್ನು ಪಡೆದ ಹರಿಣಗಳ ಪಡೆಯ ಅಗ್ರ ಬೌಲರ್ ಎನಿಸಿದ್ದರು.
ಟ್ರಿಸ್ಟನ್ ಸ್ಟಬ್ಸ್, ರೀಜಾ ಹೆಂಡ್ರಿಕ್ಸ್ ಮತ್ತು ರಿಯಾನ್ ರಿಕೆಲ್ಟನ್ ಸ್ಥಾನ ಪಡೆದಿಲ್ಲ. ಕೇವಲ ಎರಡು ಟಿ20 ಪಂದ್ಯ ಆಡಿರುವ ಟೋನಿ ಡಿ ಝೋರ್ಜಿ ಮತ್ತು ಜೇಸನ್ ಸ್ಮಿತ್ ಅವರು 15ರ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ತಂಡ ಹೀಗಿದೆ:
ಏಡನ್ ಮರ್ಕರಂ (ನಾಯಕ), ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿಕಾಕ್ (ವಿಕೆಟ್ ಕೀಪರ್), ಟೋನಿ ಡಿ ಝೋರ್ಜಿ, ಡೊನೊವಾನ್ ಫೆರೀರಾ, ಮಾರ್ಕೊ ಯಾನ್ಸೆನ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಕ್ವೇನಾ ಮಫಾಕ, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಆ್ಯನ್ರಿಚ್ ನಾಕಿಯಾ, ಕಗಿಸೊ ರಬಾಡ, ಜೇಸನ್ ಸ್ಮಿತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.