ADVERTISEMENT

T20 WC: 10 ಸಿಕ್ಸರ್ ಬಾರಿಸಿ ಗೇಲ್ ಸಾಲಿಗೆ ಸೇರಿದ ಅಮೆರಿಕದ ಬ್ಯಾಟರ್ ಜೋನ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜೂನ್ 2024, 8:17 IST
Last Updated 2 ಜೂನ್ 2024, 8:17 IST
<div class="paragraphs"><p>ಆ್ಯರನ್ ಜೋನ್ಸ್</p></div>

ಆ್ಯರನ್ ಜೋನ್ಸ್

   

(ಚಿತ್ರ ಕೃಪೆ: X/@ICC)

ಡಲ್ಲಾಸ್: ಅಮೆರಿಕದಲ್ಲಿ ಕ್ರಿಕೆಟ್ ವಿಶ್ವಕಪ್ ಇದೇ ಮೊದಲ ಬಾರಿಗೆ ಆಯೋಜನೆಯಾಗುತ್ತಿದೆ. ಅಲ್ಲದೆ ಕೆನಡಾ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಅಮೆರಿಕ ತಂಡವು ಏಳು ವಿಕೆಟ್ ಅಂತರದ ಜಯ ಗಳಿಸಿದ್ದು, ಶುಭಾರಂಭ ಮಾಡಿಕೊಂಡಿದೆ.

ADVERTISEMENT

ತವರಿನಲ್ಲಿ ನಡೆದ ಮೊದಲ ವಿಶ್ವಕಪ್ ಪಂದ್ಯದಲ್ಲೇ ಅಮೆರಿಕ ಅನೇಕ ದಾಖಲೆಗಳನ್ನು ಪುಡಿಗಟ್ಟಿದೆ. 195 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಅಮೆರಿಕ ಇನ್ನೂ 14 ಎಸೆತಗಳು ಬಾಕಿ ಉಳಿದಿರುವಂತೆಯೇ 17.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆ್ಯರನ್ ಜೋನ್ಸ್ ಕೇವಲ 40 ಎಸೆತಗಳಲ್ಲಿ 94 ರನ್ ಗಳಿಸಿ ಔಟಾಗದೆ ಉಳಿದರು. ಆ ಮೂಲಕ ಗೆಲುವಿನ ರೂವಾರಿ ಎನಿಸಿದರು.

ಗೇಲ್ ಸಾಲಿಗೆ ಜೋನ್ಸ್...

ಈ ಪಂದ್ಯದಲ್ಲಿ ಅಮೆರಿಕದ ಬ್ಯಾಟರ್ ಆ್ಯರನ್ ಜೋನ್ಸ್ 10 ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಗಳಿಸಿದರು. ಆ ಮೂಲಕ ಕ್ರಿಸ್ ಗೇಲ್ ಬಳಿಕ ಟ್ವೆಂಟಿ-20 ವಿಶ್ವಕಪ್ ಪಂದ್ಯವೊಂದರಲ್ಲಿ 10 ಸಿಕ್ಸರ್ ಗಳಿಸಿದ ಎರಡನೇ ಬ್ಯಾಟರ್ ಎನಿಸಿದ್ದಾರೆ.

ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟರ್‌ಗಳ ಪಟ್ಟಿ:

  • ಕ್ರಿಸ್ ಗೇಲ್: 11 (ಇಂಗ್ಲೆಂಡ್ ವಿರುದ್ದ, 2016)

  • ಕ್ರಿಸ್ ಗೇಲ್: 10 (ದಕ್ಷಿಣ ಆಫ್ರಿಕಾ ವಿರುದ್ದ, 2007)

  • ಆ್ಯರನ್ ಜೋನ್ಸ್: 10 (ಕೆನಡಾ ವಿರುದ್ದ, 2024)

ಮೂರನೇ ಯಶಸ್ವಿ ಚೇಸಿಂಗ್...

ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಮೂರನೇ ಯಶಸ್ವಿ ಚೇಸಿಂಗ್ ದಾಖಲೆ ಇದಾಗಿದೆ.

  • ಇಂಗ್ಲೆಂಡ್: 230/8 (ದ.ಆಫ್ರಿಕಾ ವಿರುದ್ಧ, 2016)

  • ದ.ಆಫ್ರಿಕಾ: 208/2 (ವೆಸ್ಟ್ ಇಂಡೀಸ್ ವಿರುದ್ಧ, 2007)

  • ಅಮೆರಿಕ: 197/3 (ಕೆನಡಾ ವಿರುದ್ಧ, 2024)

ದಾಖಲೆಯ ಜೊತೆಯಾಟ...

ಮೂರನೇ ವಿಕೆಟ್‌ಗೆ ಆ್ಯಂಡ್ರಿಸ್ ಗೌಸ್ ಅವರೊಂದಿಗೆ ಜೋನ್ಸ್ 131 ರನ್‌ಗಳ ಜೊತೆಯಾಟ ಕಟ್ಟಿದರು. ಇದು ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಮೂರನೇ ವಿಕೆಟ್‌ಗೆ ದಾಖಲಾದ ಎರಡನೇ ಗರಿಷ್ಠ ಜೊತೆಯಾಟವಾಗಿದೆ. 2014ರಲ್ಲಿ ಇಂಗ್ಲೆಂಡ್ ತಂಡವು ಶ್ರೀಲಂಕಾ ವಿರುದ್ಧ ಮೂರನೇ ವಿಕೆಟ್‌ಗೆ 152 ರನ್ ಗಳಿಸಿರುವುದು ಈವರೆಗಿನ ದಾಖಲೆಯಾಗಿತ್ತು.

ಅಲ್ಲದೆ ಅಮೆರಿಕದ ಪರ ಯಾವುದೇ ವಿಕೆಟ್‌ಗೆ ದಾಖಲಾದ ಗರಿಷ್ಠ ಜೊತೆಯಾಟದ ದಾಖಲೆ ಇದಾಗಿದೆ.

ಅಮೆರಿಕದ ಪರ ಅತಿ ವೇಗದ ಅರ್ಧಶತಕ ಸಾಧನೆ...

ಆ್ಯರನ್ ಜೋನ್ಸ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಆ ಮೂಲಕ ಅಮೆರಿಕದ ಪರ ಅತಿ ವೇಗದ ಅರ್ಧಶತಕ ಗಳಿಸಿದ ಆಟಗಾರ ಎನಿಸಿದ್ದಾರೆ.

ಅತಿ ವೇಗದ ಶತಕದ ಜೊತೆಯಾಟ...

ಜೋನ್ಸ್ ಹಾಗೂ ಗೌಸ್ ಕೇವಲ 42 ಎಸೆತಗಳಲ್ಲೇ ಶತಕದ ಜೊತೆಯಾಟ ಕಟ್ಟಿದರು. ಇದು ಟ್ವೆಂಟಿ-20 ವಿಶ್ವಕಪ್ ಪಂದ್ಯವೊಂದರಲ್ಲಿ ದಾಖಲಾದ ಅತಿ ವೇಗದ ಶತಕದ ಜೊತೆಯಾಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.