ADVERTISEMENT

T20 WC| ಭಾರತ ತಂಡಕ್ಕೆ ಸಿಹಿ ಸುದ್ದಿ; ಗಾಯಗೊಂಡಿದ್ದ ಆಲ್‌ರೌಂಡರ್ ತಂಡಕ್ಕೆ ವಾಪಸ್

ಪಿಟಿಐ
Published 8 ಫೆಬ್ರುವರಿ 2026, 5:22 IST
Last Updated 8 ಫೆಬ್ರುವರಿ 2026, 5:22 IST
<div class="paragraphs"><p>ವಿರಾಟ್ ಕೊಹ್ಲಿ – ವಾಷಿಂಗ್ಟನ್ ಸುಂದರ್ ಜೊತೆಯಾಟ</p></div>

ವಿರಾಟ್ ಕೊಹ್ಲಿ – ವಾಷಿಂಗ್ಟನ್ ಸುಂದರ್ ಜೊತೆಯಾಟ

   

– ಪಿಟಿಐ ಚಿತ್ರ

ಮುಂಬೈ: ಟಿ20 ವಿಶ್ವಕಪ್ 2026ಕ್ಕೂ ಮೊದಲು ಭಾರತ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿತ್ತು. ವಿಶೇಷವಾಗಿ, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದರು. ಆದರೆ, ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಫೆಬ್ರುವರಿ 12ರಂದು ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ADVERTISEMENT

ಅಮೆರಿಕ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ‘ವಾಷಿಂಗ್ಟನ್ ಸುಂದರ್ ಫಿಟ್ ಆಗಿದ್ದು, ನಮೀಬಿಯಾ ಪಂದ್ಯಕ್ಕೂ ಮುನ್ನ ದೆಹಲಿಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.

‘ಜಸ್‌ಪ್ರೀತ್ ಬೂಮ್ರಾ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕೂಡ ಇಲ್ಲಿನ ಹವಾಮಾನಕ್ಕೆ ಹೊಂದಿಕೊಂಡಿಲ್ಲ. ಹಾಗಾಗಿ, ಅಭಿಷೇಕ್ ಶರ್ಮಾ ಬದಲು ಸಂಜು ಸ್ಯಾಮ್ಸನ್ ಫಿಲ್ಡಿಂಗ್ ಕರ್ತವ್ಯ ನಿರ್ವಹಿಸಿದರು.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಸಂದರ್ಭದಲ್ಲಿ ವಾಷಿಂಗ್ಟನ್ ಸುಂದರ್ ಅವರು ಪಾರ್ಶ್ವ ನೋವು ಮತ್ತು ಪಕ್ಕೆಲುಬಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು.

ಗಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ವಾಷಿಂಗ್ಟನ್ ಅವರು ಸಂಪೂರ್ಣ ಫಿಟ್ ಆಗಿರುವುದಾಗಿ ವೈದ್ಯಕೀಯ ಮತ್ತು ಕ್ರೀಡಾ ವಿಜ್ಞಾನ ತಂಡ ಮಾಹಿತಿ ನೀಡಿದೆ. ಹಾಗಾಗಿ ಅವರು ಡೆಲ್ಲಿಯಲ್ಲಿ ನಮೀಬಿಯಾ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.