
ಕ್ರಿಕೆಟ್
(ಸಾಂಕೇತಿಕ ಚಿತ್ರ)
ದುಬೈ: ಸಾಕಷ್ಟು ಚರ್ಚೆಗೊಳಗಾಗಿರುವ ದ್ವಿಸ್ತರದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಮಾದರಿ ಸದ್ಯಕ್ಕೆ ಜಾರಿಯಾಗುವ ಸಾಧ್ಯತೆಯಿಲ್ಲ. ಇದರ ಬದಲು ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿಯು, ಎಲ್ಲ 12 ಪೂರ್ಣಪ್ರಮಾಣದ ಸದಸ್ಯ ತಂಡಗಳಿಗೆ ಮುಂದಿನ (2027ರ)ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಆಡಲು ಅವಕಾಶ ನೀಡುವ ಸಾಧ್ಯತೆಯಿದೆ.
ಪ್ರಸ್ತುತ 9 ರಾಷ್ಟ್ರಗಳು ಡಬ್ಲ್ಯುಟಿಸಿಯಲ್ಲಿ ಒಳಗೊಂಡಿವೆ. ಜಿಂಬಾಬ್ವೆ, ಅಫ್ಗಾನಿಸ್ತಾನ ಮತ್ತು ಐರ್ಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಒಳಗೊಂಡಿಲ್ಲ.
ದುಬೈನಲ್ಲಿ ನಡೆದ ಐಸಿಸಿಯ ಮಾಸಿಕ ಸಭೆಯಲ್ಲಿ ನ್ಯೂಜಿಲೆಂಡ್‌ನ ಮಾಜಿ ಬ್ಯಾಟರ್ ರೋಜರ್ ಟೂಸ್ ಅವರು ದ್ವಿಸ್ತರ ಮಾದರಿ ಬಗ್ಗೆ ಯೋಜನೆ ಮಂಡಿಸಿದರೂ ಅದಕ್ಕೆ ಬೆಂಬಲ ದೊರೆಯಲಿಲ್ಲ. ಪಾಕಿಸ್ತಾನ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಪ್ರತಿನಿಧಿಗಳು ದ್ವಿಸ್ತರ ಯೋಚನೆಗೆ ವಿರೋಧ ಸೂಚಿಸಿದವು.
ಏಕದಿನ ಕ್ರಿಕೆಟ್‌ನಲ್ಲಿ ಸೂಪರ್ ಲೀಗ್ ಯೋಜನೆಯನ್ನು ಮತ್ತೆ ಜಾರಿಗೊಳಿಸಲು ಐಸಿಸಿ ಪರಿಶೀಲಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.