
ವಿರಾಟ್ ಕೊಹ್ಲಿ–ತಿಲಕ್ ವರ್ಮಾ
ಧರ್ಮಶಾಲಾ: ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯವನ್ನು ಭಾರತ ಕ್ರಿಕೆಟ್ ತಂಡ ಸುಲಭವಾಗಿ ಗೆಲ್ಲುವ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2–1ರಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಔಟ್ ಆಗದೆ 25 ರನ್ ಸಿಡಿಸಿದ ತಿಲಕ್ ವರ್ಮಾ ಅವರು ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಎರಡು ದಾಖಲೆಗಳನ್ನು ಮುರಿದಿದ್ದಾರೆ.
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಂಡವೊಂದರ ವಿರುದ್ಧ ಅತೀ ಹೆಚ್ಚು ಸರಾಸರಿ ಹೊಂದಿರುವ ಆಟಗಾರ ಎಂಬ ಸಾಧನೆ ಮಾಡಿದ್ದ ವಿರಾಟ್ ಕೊಹ್ಲಿಯವರ ದಾಖಲೆ ಮುರಿದಿದ್ದಾರೆ. ಸದ್ಯ, ದಕ್ಷಿಣ ಆಫ್ರಿಕಾ ವಿರುದ್ಧ ತಿಲಕ್ ವರ್ಮಾ ಅವರು 70.50 ಸರಾಸರಿ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ 70.28 ಸರಾಸರಿ ಹೊಂದಿದ್ದಾರೆ.
ತಂಡವೊಂದರ ವಿರುದ್ಧ ಭಾರತೀಯ ಬ್ಯಾಟರ್ ಒಬ್ಬ ಹೊಂದಿರುವ ಅತ್ಯಧಿಕ ಟಿ20 ಸರಾಸರಿ
ತಿಲಕ್ ವರ್ಮಾ ವಿರುದ್ಧ ದಕ್ಷಿಣ ಆಫ್ರಿಕಾ*- 70.50 ಸರಾಸರಿ
ವಿರಾಟ್ ಕೊಹ್ಲಿ ವಿರುದ್ಧ ಪಾಕಿಸ್ತಾನ- 70.28 ಸರಾಸರಿ
ವಿರಾಟ್ ಕೊಹ್ಲಿ ವಿರುದ್ಧ ಶ್ರೀಲಂಕಾ- 67.8 ಸರಾಸರಿ
ಕೆ.ಎಲ್. ರಾಹುಲ್ ವಿರುದ್ಧ ವೆಸ್ಟ್ ಇಂಡೀಸ್- 58.83 ಸರಾಸರಿ
ವಿರಾಟ್ ಕೊಹ್ಲಿ ವಿರುದ್ಧ ವೆಸ್ಟ್ ಇಂಡೀಸ್- 57.0 ಸರಾಸರಿ
ಚೇಸ್ ಮಾಸ್ಟರ್ ತಿಲಕ್
ಗುರಿ ಬೆನ್ನಟ್ಟುವಾಗ ಕನಿಷ್ಠ 500 ರನ್ ಗಳಿಸಿದಾಗ ಅತೀ ಹೆಚ್ಚು ಸರಾಸರಿ ಹೊಂದಿದ್ದ ವಿರಾಟ್ ಕೊಹ್ಲಿಯವರ ದಾಖಲೆ ಮುರಿದಿದ್ದಾರೆ. ವಿರಾಟ್ ಅವರು 67.1 ಸರಾಸರಿ ಹೊಂದಿದ್ದರು. ತಿಲಕ್ ವರ್ಮಾ ಟಿ20 ಕ್ರಿಕೆಟ್‌ನ ಚೇಸಿಂಗ್‌ನಲ್ಲಿ 68ರ ಸರಾಸರಿ ಹೊಂದಿದ್ದಾರೆ.
ಟಿ20 ರನ್ ಚೇಸಿಂಗ್‌ನಲ್ಲಿ ಅತ್ಯಧಿಕ ಸರಾಸರಿ (ಕನಿಷ್ಠ 500 ರನ್‌ಗಳು)
ತಿಲಕ್ ವರ್ಮಾ* (ಭಾರತ)- 68.0
ವಿರಾಟ್ ಕೊಹ್ಲಿ (ಭಾರತ)- 67.1
ಎಂ.ಎಸ್. ಧೋನಿ (ಭಾರತ)- 47.71
ಜೆ.ಪಿ. ಡುಮಿನಿ (ದಕ್ಷಿಣ ಆಫ್ರಿಕಾ)- 45.55
ಕುಮಾರ ಸಂಗಕ್ಕಾರ (ಶ್ರೀಲಂಕಾ)- 44.93
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.