
ಶುಭಮನ್ ಗಿಲ್
(ಪಿಟಿಐ ಚಿತ್ರ)
2025ನೇ ಇಸವಿ ಮುಕ್ತಾಯಕ್ಕೆ ದಿನಗಣನೆ ಆರಂಭವಾಗಿದೆ. ಈ ವರ್ಷ ಟೆಸ್ಟ್, ಏಕದಿನ ಹಾಗೂ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರರು ಯಾರೆಂಬುದನ್ನು ತಿಳಿಯೋಣ.
ಶುಭಮನ್ ಗಿಲ್
ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭಮನ್ ಗಿಲ್ ಅವರು ಕಾಣಿಸಿಕೊಂಡಿದ್ದಾರೆ. ಅವರು ಮೂರು ಮಾದರಿಯ ಕ್ರಿಕೆಟ್‌ನಿಂದ 35 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 7 ಶತಕ ಸಹಿತ 1,764 ರನ್ ಗಳಿಸಿದ್ದಾರೆ.
ವಿಶೇಷವಾಗಿ ಶುಭಮನ್ ಗಿಲ್ ಅವರು ಇಂಗ್ಲೆಂಡ್‌ನಲ್ಲಿ ನಡೆದ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯ 5 ಪಂದ್ಯಗಳಿಂದ 754 ರನ್ ಗಳಿಸಿದ್ದರು.
ಶಾಯ್ ಹೋಪ್
ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಿಂದ 42 ಪಂದ್ಯಗಳನ್ನು ಆಡಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರ ಶಾಯ್ ಹೋಪ್ ಅವರು 2025ರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 40 ಸರಾಸರಿಯಲ್ಲಿ 1,760 ರನ್ ಗಳಿಸಿದ್ದಾರೆ.
ಜೋ ರೂಟ್
ಇಂಗ್ಲೆಂಡ್ ತಂಡದ ತಾರಾ ಬ್ಯಾಟರ್ ಜೋ ರೂಟ್ ಅವರು 2025ರಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 25 ಪಂದ್ಯಗಳಿಂದ 53.76 ಸರಾಸರಿಯಲ್ಲಿ 1,613 ರನ್ ಕಲೆಹಾಕಿದ್ದಾರೆ. ಇದರಲ್ಲಿ 7 ಶತಕ ಹಾಗೂ 5 ಅರ್ಧಶತಕ ಒಳಗೊಂಡಿದೆ.
ಬ್ರಿಯಾನ್ ಬೆನೆಟ್
ಜಿಂಬಾಬ್ವೆ ತಂಡ ಆಲ್‌ರೌಂಡರ್ ಬ್ರಿಯಾನ್ ಬೆನೆಟ್ 2025 ರಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. 22 ವರ್ಷದ ಬೆನೆಟ್ 39 ಪಂದ್ಯಗಳಿಂದ 3 ಶತಕ ಮತ್ತು 8 ಅರ್ಧಶತಕ ಸಹಿತ 1,585 ರನ್ ಕಲೆಹಾಕಿದ್ದಾರೆ.
ಸಲ್ಮಾನ್ ಅಲಿ ಆಘಾ
ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಅವರು 2025ರಲ್ಲಿ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲೂ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಅವರು ಪಾಕಿಸ್ತಾನ ತಂಡದ ಪರ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ 32.68ರ ಸರಾಸರಿಯಲ್ಲಿ 1,569 ರನ್ ಗಳಿಸಿದ್ದಾರೆ. ಈ ವೇಳೆ ಅವರು 2 ಶತಕ ಮತ್ತು 9 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.