ADVERTISEMENT

U19 ODI: ಸೂರ್ಯವಂಶಿ 9 ಸಿಕ್ಸರ್; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜುಲೈ 2025, 10:13 IST
Last Updated 3 ಜುಲೈ 2025, 10:13 IST
<div class="paragraphs"><p>ವೈಭವ್ ಸೂರ್ಯವಂಶಿ</p></div>

ವೈಭವ್ ಸೂರ್ಯವಂಶಿ

   

(ಸಂಗ್ರಹ ಚಿತ್ರ)

ನಾರ್ತಂಪ್ಟನ್‌: ಹದಿಹರೆಯದ ವೈಭವ್ ಸೂರ್ಯವಂಶಿ ಅವರು 19 ವರ್ಷದೊಳಗಿನವರ ಇಂಗ್ಲೆಂಡ್ ತಂಡದ ಎದುರಿನ ಏಕದಿನ ಸರಣಿಯಲ್ಲಿ ಒಂಬತ್ತು ಸಿಕ್ಸರ್‌ ಸಿಡಿಸಿ ದಾಖಲೆ ಬರೆದರು. ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ 19 ವರ್ಷದೊಳಗಿನವರ ತಂಡವು ಇಂಗ್ಲೆಂಡ್ ಎದುರಿನ ಯೂತ್ ಸರಣಿಯ ಮೂರನೇ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಜಯಿಸಿತು. ಸರಣಿಯಲ್ಲಿ 2–1 ಮುನ್ನಡೆ ಸಾಧಿಸಿತು. 

ADVERTISEMENT

14 ವರ್ಷದ ವೈಭವ್ ಸರಣಿಯ ಆರಂಭಿಕ ಪಂದ್ಯಗಳಲ್ಲಿ ಅರ್ಧಶತಕಗಳ ಅಂಚಿನಲ್ಲಿ ಎಡವಿದ್ದರು. ಆದರೆ ಇಲ್ಲಿ 31 ಎಸೆತಗಳಲ್ಲಿ 86 ರನ್‌ ಗಳಿಸಿದರು. ಅದರಲ್ಲಿ ಆರು ಬೌಂಡರಿಗಳಿದ್ದವು. ಅವರು ಹೊಡೆದ ಒಂಬತ್ತು ಸಿಕ್ಸರ್‌ಗಳು ದಾಖಲೆ ಪುಟ ಸೇರಿದವು. 19 ವರ್ಷದೊಳಗಿನವರ  ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಆಟಗಾರನಾದರು. ಮನದೀಪ್ ಸಿಂಗ್ (8 ಸಿಕ್ಸರ್‌) ದಾಖಲೆಯನ್ನು ಮುರಿದರು. 

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯ ತಂಡವು 40 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 268 ರನ್ ಗಳಿಸಿತು. ಅದಕ್ಕುತ್ತರವಾಗಿ ಭಾರತ ತಂಡವು 34.3 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 274 ರನ್ ಗಳಿಸಿ ಗೆದ್ದಿತು. 

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 40 ಓವರ್‌ಗಳಲ್ಲಿ 6ಕ್ಕೆ268 (ಡ್ವಾಕಿನ್ಸ್ 62, ಇಸಾಕ್ ಮೊಹಮ್ಮದ್ 41, ಬೆನ್ ಮಯೆಸ್ 31, ಥಾಮಸ್ ರೀವ್ 76, ರಾಲ್ಫಿ ಅಲ್ಬರ್ಟ್ 21, ಕೌಶಿಕ್ ಚೌಹಾಣ್ 30ಕ್ಕೆ3) ಭಾರತ: 34.3 ಓವರ್‌ಗಳಲ್ಲಿ 6ಕ್ಕೆ274 (ವೈಭವ್ ಸೂರ್ಯವಂಶಿ 86, ವಿಹಾನ್ ಮಲ್ಹೋತ್ರಾ 46, ರಾಹುಲ್ ಕುಮಾರ್ 27, ಕನಿಷ್ಕ್ ಚೌಹಾಣ್ 43, ಆರ್‌. ಅಂಬರೀಶ್ ಔಟಾಗದೆ 31, ಅಲೆಕ್ಸಾಂಡರ್ ವೇಡ್ 58ಕ್ಕೆ2) ಫಲಿತಾಂಶ: ಭಾರತ 19 ವರ್ಷದೊಳಗಿನವರ ತಂಡಕ್ಕೆ 4 ವಿಕೆಟ್‌ಗಳ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.