ADVERTISEMENT

ಸೆಮಿಫೈನಲ್‌ಗೆ ಅಂಪೈರ್‌ಗಳು

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 18:52 IST
Last Updated 7 ಜುಲೈ 2019, 18:52 IST

ಲೀಡ್ಸ್: ಇಂಗ್ಲೆಂಡ್‌ನ ಅಂಪೈರ್‌ಗಳಾದ ರಿಚರ್ಡ್‌ ಇಲ್ಲಿಂಗ್‌ ವರ್ಥ್‌ ಮತ್ತು ರಿಚರ್ಡ್ ಕೆಟಲ್‌ಬರೊ ಅವರು ಮಂಗಳವಾರ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಕಾರ್ಯನಿರ್ವಹಿಸುವರು.

ಆಸ್ಟ್ರೇಲಿಯಾದ ರಾಡ್ ಟಕ್ಕರ್ ಮತ್ತು ಇಂಗ್ಲೆಂಡ್‌ನ ನಿಗೆಲ್ ಲಾಂಗ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಅಂಪೈರ್ ಆಗಿರುವರು. ಆಸ್ಟ್ರೇಲಿಯಾದ ಡೇವಿಡ್ ಬೂನ್ ರೆಫರಿಯಾಗಿದ್ದಾರೆ.

ಎರಡನೇ ಸೆಮಿಫೈನಲ್‌ನಲ್ಲಿ ಶ್ರೀಲಂಕಾದ ಕುಮಾರ ಧರ್ಮಸೇನಾ ಮತ್ತು ದಕ್ಷಿಣ ಆಫ್ರಿಕಾದ ಮರಾಯಸ್ ಎರಸ್ಮರ್ ಅಂಪೈರಿಂಗ್ ನಿರ್ವಹಿಸಲಿ ದ್ದಾರೆ. ಮೂರನೇ ಅಂಪೈರ್ ಆಗಿ ನ್ಯೂಜಿ ಲೆಂಡ್‌ನ ಕ್ರಿಸ್ ಗಫಾನಿ ಮತ್ತು ನಾಲ್ಕನೇ ಅಂಪೈರ್‌ ಆಗಿ ಪಾಕಿಸ್ತಾನದ ಅಲೀಂ ದಾರ್ ನೇಮಕವಾಗಿದ್ದರೆ, ಶ್ರೀಲಂಕಾದ ರಂಜನ್ ಮದುಗಲೆ ರೆಫರಿಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.