ADVERTISEMENT

SSLC ಪರೀಕ್ಷೆ ಬರೆಯಲಿದ್ದಾನೆ ವಿಶ್ವಕಪ್ ಗೆದ್ದ ವೈಭವ್ ಸೂರ್ಯವಂಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2026, 16:02 IST
Last Updated 15 ಫೆಬ್ರುವರಿ 2026, 16:02 IST
   

ಇತ್ತೀಚೆಗೆ ಮುಕ್ತಾಯಗೊಂಡ 19 ವರ್ಷದೊಳಗಿನವರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಭಾರತದ ಕ್ರಿಕೆಟ್ ತಾರೆ ವೈಭವ್‌ ಸೂರ್ಯವಂಶಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.

ವಿಶೇಷವಾಗಿ ಫೈನಲ್‌ ಪಂದ್ಯದಲ್ಲಿ 175 ರನ್ ಗಳಿಸುವ ಮೂಲಕ ಭಾರತ ತಂಡ 6ನೇ ಬಾರಿ ಅಂಡರ್ 19 ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶ್ವಕ‍ಪ್ ಗೆದ್ದಿರುವ ವೈಭವ್ ಇದೀಗ 10ನೇ ತರಗತಿ (SSLC) ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ. 

ಫೆಬ್ರುವರಿ 17ರಿಂದ 10ನೇ ತರಗತಿಯ ಪರೀಕ್ಷೆ ಆರಂಭವಾಗಲಿದ್ದು, 14 ವರ್ಷದ ವೈಭವ್‌ ಸೂರ್ಯವಂಶಿ ಎಲ್ಲರಂತೆ ಪರೀಕ್ಷೆಗೆ ಹಾಜರಾಗಲಿದ್ದಾರೆ. ಬಿಹಾರದ ಸಮಷ್ಟಿಪುರದಲ್ಲಿರುವ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವೈಭವ್‌ ಪರೀಕ್ಷೆ ಬರೆಯಲಿದ್ದಾರೆ ಎಂದು ಶಾಲಾ ಪ್ರಾಂಶುಪಾಲ ನೀಲ್ ಕಿಶೋರ್ ತಿಳಿಸಿದ್ದಾರೆ.

ADVERTISEMENT

‘ನಮ್ಮ ಶಾಲೆಯಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಹಾಜರಾಗಲಿದ್ದಾರೆ. ಅವರಿಗೆ ಪ್ರವೇಶ ಪತ್ರ ತಲುಪಿಸಲಾಗಿದೆ. ವೈಭವ್‌ ಆಗಮನಕ್ಕೆ ಶಿಕ್ಷಕರು ಸೇರಿಂದಂತೆ ಎಲ್ಲರೂ ಉತ್ಸಾಹದಿಂದ ಕಾಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.  

‘ವೈಭವ್‌ ಇನ್ನೂ ವಿದ್ಯಾರ್ಥಿಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆ ಬರೆಯಲು ವ್ಯವಸ್ಥೆಗಳನ್ನು ಮಾಡಿದ್ದೇವೆ. ಇದು ಕ್ರಿಕೆಟ್ ಪಿಚ್ ಅಲ್ಲ, ಶೈಕ್ಷಣಿಕ ಪಿಚ್. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ’, ಎಂದು ನೀಲ್ ಕಿಶೋರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.