ADVERTISEMENT

ಈ ಬಾರಿಯ ಫೈನಲ್‌ ‘ಎಕ್ಸ್‌ಟ್ರಾ ಸ್ಪೆಷಲ್‌’: ಡೇನಿಯಲ್‌ ವೆಟೋರಿ

ಉಭಯ ತಂಡಗಳಿಗೂ ಸಮಾನ ಅವಕಾಶ

ಪಿಟಿಐ
Published 13 ಜುಲೈ 2019, 20:12 IST
Last Updated 13 ಜುಲೈ 2019, 20:12 IST
ಡೇನಿಯಲ್‌ ವೆಟೋರಿ
ಡೇನಿಯಲ್‌ ವೆಟೋರಿ   

ಲಂಡನ್‌: ಈ ಬಾರಿಯ ಫೈನಲ್‌ನಲ್ಲಿ ಯಾರೇ ಗೆದ್ದರೂ ಆ ತಂಡ ಮೊದಲ ಬಾರಿ ವಿಶ್ವಕಪ್‌ ಚಾಂಪಿಯನ್‌ ಆಗಲಿರುವ ಕಾರಣ ಭಾನುವಾರದ ಪಂದ್ಯ ‘ಹೆಚ್ಚು ವಿಶೇಷದ್ದು’ ಎನಿಸಲಿದೆ ಎಂದು ನ್ಯೂಜಿಲೆಂಡ್‌ನ ಮಾಜಿ ನಾಯಕ ಡೇನಿಯಲ್‌ ವೆಟೋರಿ ಬಣ್ಣಿಸಿದ್ದಾರೆ.

‘ಫೈನಲ್‌ ತಲುಪಿರುವುದರಿಂದ ಎರಡೂ ತಂಡಗಳು ಹೆಚ್ಚು ಆಟಕ್ಕಿಳಿ ಯಲು ಕಾತರದಲ್ಲಿವೆ’ ಎಂದು ವೆಟೋರಿ ಐಸಿಸಿ ಅಂಕಣದಲ್ಲಿ ಬರೆದಿದ್ದಾರೆ.‌

‘1996ರಲ್ಲಿ ಶ್ರೀಲಂಕಾ ಮೊದಲ ಬಾರಿ ಕಪ್‌ ಗೆದ್ದಾಗ, ದೇಶದಾದ್ಯಂತ ಸಂಭ್ರಮದ ಅಲೆಯೆದ್ದಿತ್ತು. ನ್ಯೂಜಿಲೆಂಡ್‌ನಲ್ಲೂ ಅದೇ ತರ ಆಗಬಹುದು’ ಎಂದು ಅವರ ಹೇಳಿದರು. ಫೈನಲ್‌ನಲ್ಲಿ ಇತ್ತಂಡಗಳಿಗೆ ಗೆಲ್ಲುವ ಅವಕಾಶ 50–50 ಎಂದು ಎಡಗೈ ಸ್ಪಿನ್ನರ್‌ ಹೇಳಿದರು.

ADVERTISEMENT

‘ಇಂಗ್ಲೆಂಡ್‌ನ ಇಯಾನ್‌ ಮಾರ್ಗನ್‌ ಮತ್ತು ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ ಆವರು ಬಹುಶಃ ಈ ವಿಶ್ವಕಪ್‌ನ ಅತ್ಯುತ್ತಮ ನಾಯಕರು. ಫೈನಲ್‌ನಲ್ಲಿ ಅವರು ಎದುರಾಗುತ್ತಿರು ವುದು ಸಮಯೋಚಿತವಾಗಿದೆ’ ಎಂದರು.

ವಿಲಿಯಮ್ಸನ್‌, ರಾಸ್‌ ಟೇಲರ್‌, ಮಾರ್ಟಿನ್‌ ಗಪ್ಟಿಲ್‌ ಸೇರಿದಂತೆ ಈಗಿನ ನ್ಯೂಜಿಲೆಂಡ್‌ ತಂಡದ ಆರು ಆಟಗಾರರು 2015ರ ಫೈನಲ್‌ನಲ್ಲೂ ಆಡಿದ್ದಾರೆ. ಇದು ತಂಡದ ಅವಕಾಶದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಟ್ರೆಂಟ್‌ ಬೌಲ್ಟ್‌, ಮ್ಯಾಟ್‌ ಹೆನ್ರಿ ಮತ್ತು ಟಿಮ್‌ ಸೌಥಿ ಕೂಡ ಮೆಲ್ಬರ್ನ್‌ನ ಫೈನಲ್‌ನಲ್ಲಿ ಆಡಿದ್ದರು. ಹೀಗೆ ಪ್ರಮುಖರಿಗೆ ಸವಾಲಿನ ಅನುಭವವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.