ಲಂಡನ್: ಇತ್ತೀಚಿನ ಎರಡು ಸೋಲುಗಳ ಹೊರತಾಗಿಯೂ ನ್ಯೂಜಿಲೆಂಡ್ ತಂಡ ಗಾಬರಿಯಾಗಬೇಕಾಗಿಲ್ಲ. ಈಗಲೂ ಕಿವೀಸ್ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲೊಂದಾಗಿದೆ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಡೇನಿಯಲ್ ವೆಟೋರಿ ಹೇಳಿದ್ದಾರೆ.
ನ್ಯೂಜಿಲೆಂಡ್ ಭಾನುವಾರ ನಡೆದ ಪಂದ್ಯದಲ್ಲಿ ಸಾಂಪ್ರದಾಯಿ ಎದುರಾಳಿ, ನೆರೆಯ ಆಸ್ಟ್ರೇಲಿಯಾಕ್ಕೆ ಶರಣಾಗಿತ್ತು. ಅದಕ್ಕೂ ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದೆದುರು ಸೋಲನುಭವಿಸಿತ್ತು. ಒಂದು ಹಂತದಲ್ಲಿ ನ್ಯೂಜಿಲೆಂಡ್ ತಂಡ ಸೆಮಿಫೈನಲ್‌ನತ್ತ ಮುನ್ನುಗ್ಗುವಂತೆ ಕಾಣುತಿತ್ತು. ಆದರೆ ನಾಲ್ಕರ ಹಂತ ಇನ್ನೂ ಖಚಿತವಾಗಿಲ್ಲ. ಅದು ಜುಲೈ 3ರಂದು ತನ್ನ ಕೊನೆಯ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಆಡಬೇಕಾಗಿದೆ.
2015ರ ವಿಶ್ವಕಪ್ ಫೈನಲ್ ತಲುಪಿದ್ದ ನ್ಯೂಜಿಲೆಂಡ್ ನಾಲ್ಕರ ಘಟ್ಟಕ್ಕೇರುವ ಮೊದಲು, ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸಂಯಮ ತೋರಬೇಕಾಗಿದೆ. ಈ ತಂಡ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸುವ ಸಾಮರ್ಥ್ಯ ಹೊಂದಿದೆ ಎಂದು ಹಿರಿಯ ಎಡಗೈ ಸ್ಪಿನ್ನರ್ ವೆಟೋರಿ ಐಸಿಸಿ ಮೀಡಿಯಾಕ್ಕೆ ಬರೆದ ಅಂಕಣನಲ್ಲಿ ವಿಶ್ಲೇಷಿಸಿದ್ದಾರೆ.
‘ಈ ಹಂತದಲ್ಲಿ ಎರಡು ಸೋಲು ಅರಗಿಸಿಕೊಳ್ಳುವುದು ಕಷ್ಟ. ಆದರೆ ವಿಶ್ವಕಪ್‌ನ ಹೆಚ್ಚಿನ ಅವಧಿಯಲ್ಲಿ ತಂಡ ಚೆನ್ನಾಗಿಯೇ ಆಡಿದೆ. ಅನುಭವಿ ಆಟಗಾರರು ತಂಡದಲ್ಲಿದ್ದು, ತಂಡ ಮುನ್ನಡೆಯುವುದು ಖಚಿತ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.