
ಅಥರ್ವ ತೈಡೆ ಶತಕ ಸಂಭ್ರಮ
ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರು: ಅಥರ್ವ ತೈಡೆ ಅಮೋಘ ಶತಕ ಮತ್ತು ಯಶ್ ಠಾಕೂರ್ ಶಿಸ್ತಿನ ದಾಳಿಯ ಬಲದಿಂದ ವಿದರ್ಭ ತಂಡವು ವಿಜಯ್ ಹಜಾರೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಭಾನುವಾರ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವು 38 ರನ್‌ಗಳಿಂದ ಸೌರಾಷ್ಟ್ರ ಎದುರು ಜಯಭೇರಿ ಬಾರಿಸಿತು. ಇದರೊಂದಿಗೆ ಮೂರನೇ ಸಲ ಚಾಂಪಿಯನ್ ಆಯಿತು. ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವನ್ನು ವಿದರ್ಭ ಸೋಲಿಸಿತ್ತು. ಹೋದ ವರ್ಷದ ಟೂರ್ನಿಯ ಫೈನಲ್‌ನಲ್ಲಿ ವಿದರ್ಭ ಕರ್ನಾಟಕದ ಎದುರು ಪರಾಭವಗೊಂಡಿತ್ತು.
ಟಾಸ್ ಗೆದ್ದ ಸೌರಾಷ್ಟ್ರ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಥರ್ವ್ (128; 118ಎ, 4X15, 6X3) ಮತ್ತು ಅಮನ್ ಮೊಖಡೆ (33; 45ಎ) ಅವರು ಮೊದಲ ವಿಕೆಟ್‌ಗೆ 80 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಅಮನ್ ಅವರು ಟೂರ್ನಿಯಲ್ಲಿ 800ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದರು. ಯಶ್ ರಾಥೋಡ್ (54; 61 ಎ) ಅರ್ಧಶತಕ ಗಳಿಸಿದರು. ಇದರಿಂದಾಗಿ ವಿದರ್ಭ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 317 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡದ ಆರಂಭ ಅಷ್ಟೇನೂ ಚೆನ್ನಾಗಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಪ್ರೇರಕ್ ಮಂಕಡ್ (88; 92) ಮತ್ತು ಚಿರಾಗ್ ಜಾನಿ (64; 63ಎ) ಅವರ ಹೋರಾಟವು ತಂಡದ ಗೆಲುವಿಗೆ ಸಾಕಾಗಲಿಲ್ಲ. ವಿದರ್ಭದ ಯಶ್ ಠಾಕೂರ್ (50ಕ್ಕೆ4) ಮತ್ತು ನಚಿಕೇತ್ ಭೂತೆ (46ಕ್ಕೆ3) ಅವರ ಅಮೋಘ ದಾಳಿಯ ಮುಂದೆ ಸೌರಾಷ್ಟ್ರ ಕುಸಿಯಿತು. 48.5 ಓವರ್‌ಗಳಲ್ಲಿ 279 ರನ್ ಗಳಿಸಿತು.
ಸಂಕ್ಷಿಪ್ತ ಸ್ಕೋರು: ವಿದರ್ಭ: 50 ಓವರ್‌ಗಳಲ್ಲಿ 8ಕ್ಕೆ317 (ಅಥರ್ವ್ ತೈಡೆ 128, ಅಮನ್ ಮೊಖಡೆ 33, ಯಶ್ ರಾಥೋಡ್ 54, ಆರ್. ಸಮರ್ಥ್ 25, ಚೇತನ್ ಸಕಾರಿಯಾ 45ಕ್ಕೆ2, ಚಿರಾಗ್ ಜಾನಿ 65ಕ್ಕೆ2, ಅಂಕುರ್ ಪನ್ವರ್ 65ಕ್ಕೆ4)
ಸೌರಾಷ್ಟ್ರ: 48.5 ಓವರ್‌ಗಳಲ್ಲಿ 279 (ಹರ್ವಿಕ್ ದೇಸಾಯಿ 20, ಪ್ರೇರಕ್ ಮಂಕಡ್ 88, ಸಮರ್ ಗಜ್ಜರ್ 25, ಚಿರಾಗ್ ಜಾನಿ 64, ರುಚಿತ್ ಅಹಿರ್ 21, ಯಶ್ ಠಾಕೂರ್ 50ಕ್ಕೆ4, ನಚಿಕೇತ್ ಭೂತೆ 46ಕ್ಕೆ3, ದರ್ಶನ ನಾಲ್ಕಂಡೆ 52ಕ್ಕೆ2)
ಫಲಿತಾಂಶ: ವಿದರ್ಭ ತಂಡಕ್ಕೆ 38 ರನ್ ಜಯ. ಪಂದ್ಯ ಆಟಗಾರ: ಅಥರ್ವ ತೈಡೆ, ಸರಣಿ ಆಟಗಾರ: ಅಮನ್ ಮೊಖಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.